Site icon newsroomkannada.com

ಪತಂಜಲಿ ಸಂಸ್ಥೆಯ 10 ಉತ್ಪನ್ನಗಳ ಉತ್ಪಾದನೆ ಲೈಸೆನ್ಸ್ ರದ್ದು ; ಉತ್ತರಾಖಂಡ ಸರ್ಕಾರ ಆದೇಶ

ನವದೆಹಲಿ: ಪತಂಜಲಿ ಸಂಸ್ಥೆಗೆ ಸೇರಿದ ದಿವ್ಯ ಫಾರ್ಮಸಿಯ 10 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಉತ್ತರಾಖಂಡ ಸರ್ಕಾರ ಅಮಾನತುಗೊಳಿಸಿದೆ. ಉತ್ತರಾಖಂಡ ಔಷಧ ಪರವಾನಗಿ ಪ್ರಾಧಿಕಾರ ಪತಂಜಲಿ ಸಂಸ್ಥೆಯ ಲೈಸೆನ್ಸ್ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 

ಉತ್ಪನ್ನಗಳಿಗೆ ಸಂಬಂಧಿಸಿದಂತೆ ದಾರಿ ತಪ್ಪಿಸುವ ಜಾಹಿರಾತುಗಳನ್ನು ಪ್ರಕಟಿಸಿದ್ದರ ಬಗ್ಗೆ ದೂರುಗಳು ದಾಖಲಾಗಿದ್ದವು. ಜಾಹಿರಾತುಗಳು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತವೆ ಎಂದು ದೂರಲಾಗಿತ್ತು.

 

ಈ ಕುರಿತು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸಂಸ್ಥೆಯಿಂದ ಸರಿಯಾದ ಮಾಹಿತಿಯನ್ನು ಒದಗಿಸಿರಲಿಲ್ಲ ಮತ್ತು ಅದರ ರಕ್ಷಣೆಗಾಗಿ ನೀಡಿದ ವಿವರಣೆ ತೃಪ್ತಿಕರವಾಗಿಲ್ಲ ಎಂದು ಪ್ರಾಧಿಕಾರವು ತನ್ನ ಆದೇಶದಲ್ಲಿ ತಿಳಿಸಿದೆ. ಆದೇಶದ ಪ್ರಕಾರ, ದಿವ್ಯಾ ಫಾರ್ಮಸಿ ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿದ್ದು, ಈ ಪೈಕಿ ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ, ಮುಕ್ತ ವತಿ ಎಕ್ಸ್‌ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್ ಮತ್ತು ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್ ಉತ್ಪನ್ನಗಳು ಸೇರಿವೆ.

Exit mobile version