ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಇಲ್ಲಿನ ಬನ್ನೂರಿನ ಕರ್ಮಲದಲ್ಲಿರುವ ಸನ್ನಿಧಿ ಲೇ ಔಟ್ ನಲ್ಲಿ ಇಂದು (ಸೆ.24) ನಡೆದಿದೆ.
ವಿವೇಕಾನಂದ ಕಾಲೇಜಿನಲ್ಲಿ ತೃತೀಯ ವರ್ಷದ ಬಿಸಿಎ ಓದುತ್ತಿದ್ದ ಕೀರ್ತಿಕಾ (19) ಎಂಬ ಯುವತಿಯ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.
ಇಲ್ಲಿನ ಕರ್ಮಲ ಸನ್ನಿಧಿ ಲೇ ಔಟ್ ನಿವಾಸಿ ಕಿಶೋರ್ ಎಂಬವರ ಪುತ್ರಿಯಾಗಿರುವ ಕೀರ್ತಿಕಾ ಇಂದು ಮಧ್ಯಾಹ್ನ ತನ್ನ ಮನೆಯೊಳಗಿದ್ದ ಸೀಲಿಂಗ್ ಫ್ಯಾನಿಗೆ ಬೆಡ್ ಶೀಟ್ ಸುತ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.