ಬೆಂಗಳೂರು: ಕಂಬಳ ಕರಾವಳಿ ಜನರ ಬಹಳ ಪುರಾತನವಾದ ಕಲೆ, ಜಾನಪದ ಕಲೆ ಇದು. ಅಶೋಕ್ ರೈ ನೇತೃತ್ವದಲ್ಲಿ ಕರಾವಳಿ ಜಾನಪದ ಕ್ರೀಡೆ ಸಿಲಿಕಾನ್ ಸಿಟಿಯಲ್ಲಿ ಪರಿಚಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಉದ್ಘಾಟನೆ ಮಾಡಿದ ಬಳಿಕ, ತುಳು ಭಾಷೆ ಬಗ್ಗೆ ಪ್ರಸ್ತಾಪ ಮಾಡಿದ ಸಿಎಂ ಸಿದ್ದರಾಮಯ್ಯನವರು, ಕರಾವಳಿ ಜನರು ಜಗತ್ತಿನ ಯಾವುದೇ ಮೂಲೆಯಲ್ಲಿ ಸಿಕ್ಕರೂ ಅವರು ತುಳುವಿನಲ್ಲೆ ಮಾತು ಪ್ರಾರಂಭಿಸುತ್ತಾರೆ, ತುಳುವೇ ಮಾತನಾಡುತ್ತಾರೆ. ನಾನು ಈ ಬಗ್ಗೆ ಕನ್ನಡ ಸಂಸ್ಕೃತಿ ಸಚಿವರ ಜೊತೆ ಮಾತಾಡಿ ಇದನ್ನು ರಾಜ್ಯದ ಎರಡನೇ ಭಾಷೆಯಾಗಿ ಮಾಡುತ್ತೇನೆ. ಹಿಂದಿನ ಮಿನಿಸ್ಟರ್ ನಿಮ್ಮ ಭಾಗದವರೇ ಆದರೂ ಅದನ್ನು ಮಾಡಲಿಲ್ಲ. ಆದರೆ ನಾವು ಮಾಡುತ್ತೇವೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯನವರು ಮಾಜಿ ಸಚಿವ ಸುನಿಲ್ ಕುಮಾರ್‌ಗೆ ಟಾಂಗ್ ನೀಡಿದರು.
ಅಶೋಕ್ ರೈ, ಗುರು ಕಿರಣ್ ನನ್ನ ಬೇಟಿ ಆಗೋಕೆ ಬಂದಾಗ , ಇಷ್ಟೊಂದು ಜನ ಕಂಬಳ ವೀಕ್ಷಣೆ ಬರ್ತಾರೆ ಅಂತಾ ಅನ್ಕೊಂಡಿಲ್ಲ. ಅದಕ್ಕಾಗಿ ಅವರಿಗೆ ಈ ಕ್ರೀಡೆ ಉಡುಪಿ ಮಂಗಳೂರಿನಲ್ಲಿ ನಡೀ ಬೇಕು ಅಂತಾ ಹೇಳಿದ್ದೆ. ಆದರೆ ಕಂಬಳ ಸಮಿತಿಯವರು ಹೇಳಿದ್ರು ಲಕ್ಷಾಂತರ ಕರಾವಳಿ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಕಂಬಳಕ್ಕೆ ರಾಜ್ಯದ ಮೂಲೆಯಿಂದ ಜನ ಬರ್ತಾರೆ ಅಂದಿದ್ರು. ಆಗ ನಾನೂ ಬರ್ತೇನೆ ಅಂದಿದ್ದೆ. ಬಹಳಷ್ಟು ಜನ ಕ್ರೀಡೆಯನ್ನ ನೋಡೋಕೆ ಬಂದಿದ್ದಾರೆ. ಇವತ್ತು ಬಹಳ ಆಶ್ಚರ್ಯ ಆಯ್ತು ಎಂದರು.
ಅಶೋಕ್ ರೈ ನೇತೃತ್ವದಲ್ಲಿ ಎರಡು ಕರೆಯಲ್ಲಿ ಕಂಬಳ ಅದ್ಧೂರಿಯಾಗಿ ನಡೀತಾ ಇದೆ. ಕರಾವಳಿಯ ಬಹಳಷ್ಟು ಜನ ಈ ಕಲೆಯನ್ನ ಮೈಗೂಡಿಸಿಕೊಂಡಿದ್ದಾರೆ ಎಂದರು.