ಮಂಗಳೂರು: ತಣ್ಣೀರು ಬಾವಿಯಲ್ಲಿ ಬೋಟ್ ರಿಪೇರಿ ಕಾರ್ಯದಲ್ಲಿ ಕಾರ್ಮಿಕರಾಗಿದ್ದ ಇಬ್ಬರು ಕಾರ್ಮಿಕರು ಹೊಡದಾಡಿಕೊಂಡು ಓರ್ವ ಮೃತಪಟ್ಟ ಘಟನೆ ನಡೆದಿದೆ.
ಕೊಲ್ಲಂ ಮೂಲದ ಬಿನು(41) ಮತ್ತು ತಳಿಪರಂಬ ನಿವಾಸಿ ಜಾನ್ಸನ್ ಬಿನೋಯ್ (52) ತಣ್ಣೀರುಬಾವಿಯಲ್ಲಿ ಬೋಟ್ ರಿಪೇರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ ವೇಳೆ ಬಿನೋಯ್ ತನ್ನ ರೂಮಿನಲ್ಲಿ ಮಲಗಿದ್ದಾಗ ಜಾನ್ಸನ್ ಕುಡಿದ ಮತ್ತಿನಲ್ಲಿ ಬಿನೋಯ್ ನನ್ನು ಇರಿದು ಕೊಂದು ಹಾಕಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.