Site icon newsroomkannada.com

ಚಿಕನ್‌ ಲಾಲಿಪಪ್‌ಗಾಗಿ ಗಲಾಟೆ, ಸೆಕ್ಸ್‌ಗಾಗಿ ಕರೆತಂದ ಡಾನ್ಸರ್‌ಗೆ ಗುಂಡಿಟ್ಟ ವ್ಯಕ್ತಿ!

ನವದೆಹಲಿ: ಆರ್ಕೆಸ್ಟ್ರಾದಲ್ಲಿ ಡಾನ್ಸ್‌ ಮಾಡಿಕೊಂಡು ಜೀವ ಸಾಗಿಸುತ್ತಿದ್ದ ಡಾನ್ಸರ್‌ ಒಬ್ಬಳನ್ನು ಬಿಹಾರದ ಮುಜಾಫರ್‌ನಗರ ಜಿಲ್ಲೆಯಲ್ಲಿ ಶೂಟ್‌ ಮಾಡಲಾಗಿದೆ. ಈಕೆಗೆ ಶೂಟ್‌ ಮಾಡಿರುವ ವ್ಯಕ್ತಿ ಈಕೆಯ ಜೊತೆ ಸೆಕ್ಸ್‌ ಮಾಡುವ ಉದ್ದೇಶ ಹೊಂದಿದ್ದ. ಅದಕ್ಕಾಗಿ ತಾವಿಬ್ಬರೂ ಗಂಡ-ಹೆಂಡತಿ ಎಂದು ಹೋಟೆಲ್‌ ರೂಮ್‌ ಕೂಡ ಬುಕ್‌ ಮಾಡಿದ್ದ ಎಂದು ಮುಜಾಫರ್‌ ನಗರ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅವದೇಶ್‌ ಸರೋಜ್‌ ದೀಕ್ಷಿತ್‌ ಹೇಳಿದ್ದಾರೆ. ಹೋಟೆಲ್‌ ರೂಮ್‌ನಲ್ಲಿಯೇ ಮಹಿಳೆಗೆ ಗುಂಡು ಹಾರಿಸಲಾಗಿದ್ದು, ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದಾನೆ.

ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ, ಇಮ್ರಾನ್‌ ಅಲಿ ಹೆಸರಿನ ವ್ಯಕ್ತಿ, ಮಿಥನ್‌ಪುರ ಚೌಕದಲ್ಲಿರುವ ಎಲ್‌ವಿ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಆರ್ಕೆಸ್ಟ್ರಾ ಡಾನ್ಸರ್‌ ಜೊತೆ ರೂಮ್‌ ಬುಕ್‌ ಮಾಡಿದ್ದ. ರೂಮ್‌ಗೆ ಹೋದವರೇ ಇಬ್ಬರಿಗಾಗಿ ಚಿಕನ್‌ ಲಾಲಿಪಪ್‌ ಬುಕ್‌ ಮಾಡಿದ್ದು, ಬಳಿಕ ಇಬ್ಬರೂ ಅದನ್ನು ತಿಂದಿದ್ದಾರೆ. ಆದರೆ, ಇದಾದ ಕೆಲವು ಸಮಯದ ಬಳಿಕ ಚಿಕನ್‌ ಲಾಲಿಪಪ್‌ ವಿಚಾರವಾಗಿಯೇ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಸಿಟ್ಟಿನ ಭರದಲ್ಲಿ ವ್ಯಕ್ತಿ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಡಾನ್ಸರ್‌ನ ಬಾಯಿಗೆ ಗುಂಡು ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ. ಆರೋಪಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪಿಸ್ತೂಲ್‌ನಿಂದ ಬಂದ ಗುಂಡೇಟು ಆಕೆಯ ಕೆನ್ನೆಯನ್ನು ಹರಿದು ಹಾಕಿದೆ. ಸ್ಥಳದಿಂದ ಒಂದು ಪಿಸ್ತೂಲ್ ಮತ್ತು ಎರಡು ಜೀವಂತ ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ. ಕೋಣೆಯಲ್ಲಿನ ಹಾಸಿಗೆಯ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ.

Exit mobile version