main logo

ಛೆಛೆಛೆ ಚೀಚೀಚೀ ಅದಕ್ಕೂ ಆ್ಯಪ್ ಉಂಟಾ ಮಾರಾಯ್ರೆ

ಛೆಛೆಛೆ ಚೀಚೀಚೀ ಅದಕ್ಕೂ ಆ್ಯಪ್ ಉಂಟಾ ಮಾರಾಯ್ರೆ

ಮುಂಬೈ: ಮಹದಾವೇ ಬೆಟ್ಟಿಂಗ್ ಆ್ಯಪ್ ಪ್ರಕರಣ ಬೆನ್ನಲ್ಲೇ ಇದೀಗ ಲೈವ್ ಸೆಕ್ಸ್ ಶೋ ರಾಕೆಟ್ ಬಯಲಾಗಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡ ಬಳಕೆದಾರರು ನಿರ್ದಿಷ್ಟ ಹಣ ಪಾವತಿಸಿ ಲೈವ್ ಆಗಿ ಸೆಕ್ಸ್ ಶೋ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಇದೀಗ ಈ ಲೈವ್ ಸೆಕ್ಸ್ ಶೋ ರಾಕೆಟ್ ಜಾಲ ಬಹಿರಂಗವಾಗಿದೆ. ಮುಂಬೈನಲ್ಲಿ ನಡೆಯುತ್ತಿದ್ದ ಈ ಜಾಲವನ್ನು ವರ್ಸೋವಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಪಿಹು ಆಫೀಶಿಯಲ್ ಆ್ಯಪ್(Pihu Official App) ಅನ್ನೋ ಆ್ಯಪ್ ಲೈವ್ ಸೆಕ್ಸ್ ಶೋ ನಡೆಸುತ್ತಿದೆ. ಬಳಕೆದಾರರಿಗೆ 1,000 ರೂಪಾಯಿಯಿಂದ 10,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ ಅನ್ನೋ ಮಾಹಿತಿ ಪಡೆದ ವರ್ಸೋವಾ ಪೊಲೀಸರು, ಕಾರ್ಯಚರಣೆ ಆರಂಭಿಸಿದ್ದರು. ಮಾಹಿತಿ ಸತ್ಯಾಸತ್ಯತೆ ಪರಿಶೀಲಿಸಿದ ಪೊಲೀಸರು ರಹಸ್ಯವಾಗಿ ವರ್ಸೋವಾದಲ್ಲಿ ವಾಣಿಜ್ಯ ಕಟ್ಟಡಜಲ್ಲಿ ನಡೆಯುತ್ತಿದ್ದ ಈ ಲೈವ್ ಸೆಕ್ಸ್ ಶೋ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಪೊಲೀಸರ ದಾಳಿ ವೇಳೆ ಲೈವ್ ಸೆಕ್ಸ್ ಶೋ ನಡೆಯುತ್ತಿತ್ತು. ದಾಳಿ ವೇಳೆ 20 ವರ್ಷದ ತನಿಶಾ, 34 ವರ್ಷದ ತಮನ್ನಾ ಹಾಗೂ 27 ವರ್ಷದ ರುದ್ರ ನಾರಾಯಣ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆ್ಯಪ್ ಮೂಲಕ ಹಲವು ಯುವತಿಯರು ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಬಳಿಕ ಲೈವ್ ಆಗಿ ಸೆಕ್ಸ್ ನಡೆಸುತ್ತಿದ್ದರು. ಇನ್ನು ಯುವತಿಯರ ಹಸ್ತಮೈಥುನ, ಬೆತ್ತಲೇ ಶೋಗಳು ಈ ಆ್ಯಪ್‌ನಲ್ಲಿ ಲೈವ್ ಆಗಿ ನಡೆಯುತ್ತಿತ್ತು.

ರಹಸ್ಯವಾಗಿ ನಡೆಯುತ್ತಿದ್ದರೂ ಆ್ಯಪ್‌ ಡೌನ್ಲೋಡ್ ಸಂಖ್ಯೆ ಪ್ರಮಾಣ ಹೆಚ್ಚಿದೆ. ಇನ್ನು ಪ್ರತಿಯೊಬ್ಬ ಬಳಕೆದಾರನ ಆಸಕ್ತಿಯ ವಿಷಯ, ಲೈವ್ ಸಮಯಕ್ಕೆ ತಕ್ಕಂತೆ ಸಾವಿರ ರೂಪಾಯಿಂದ 10,000 ರೂಪಾಯಿ ವರೆಗೆ ಚಾರ್ಜ್ ಮಾಡಲಾಗುತ್ತಿತ್ತು. ಪ್ರತಿ ದಿನ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿತ್ತು. ಇದೀಗ ಈ ಜಾಲವನ್ನು ವರ್ಸೋವಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!