newsroomkannada.com

Oddur Farmನಲ್ಲಿ ’ಒಡ್ಡೂರು ಎನರ್ಜಿ’ ಉದ್ಘಾಟಿಸಿದ ಕೇಂದ್ರ ಸಚಿವ ಭಗಂತ ಖೂಬ

ಬಂಟ್ವಾಳ : ದೇಶದಲ್ಲಿ ಹಸಿರು ಇಂಧನ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. 2030ರಲ್ಲಿ ದೇಶದಲ್ಲಿ 500 ಗಿಗಾವ್ಯಾಟ್ ಹಸಿರು ಇಂಧನ ಉತ್ಪಾದನೆ ಮಾಡುವ ಗುರಿ ಇದೆ ಎಂದು ಕೇಂದ್ರ ಸಚಿವ ಭಗವಂತ ಖೂಬ ತಿಳಿಸಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಒಡ್ಡೂರು ಫಾರ್ಮ್ ನಲ್ಲಿ ತ್ಯಾಜ್ಯ ದಿಂದ ನೈಸರ್ಗಿಕ ಅನಿಲ ಉತ್ಪಾದನಾ ಘಟಕವಾಗಿರುವ ಒಡ್ಡೂರು ಎನರ್ಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೌರಶಕ್ತಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇಂಧನ ಉತ್ಪಾದನಾ ಘಟಕ ಮಾಡುವವರಿಗೆ ಸರಕಾರ ಸಹಾಯಧನ ಮೂಲಕ ನೆರವು ನೀಡಲಿದೆ ಎಂದು ಸಚಿವ ಖೂಬಾ ಇದೇ ಸಂದರ್ಭದಲ್ಲಿ ತಿಳಿಸಿದರು..

ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ,’ಸರಕಾರ ಮಾಡಬೇಕಾದ ಕಸ ವಿಲೇವಾರಿ ಕೆಲಸವನ್ನು ಶಾಸಕ ರಾಜೇಶ್ ನಾಯಕ್ ತಮ್ಮ ಜಮೀನಿನಲ್ಲಿ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿಮಾಡುತ್ತಾ, ಸಂಕುಚಿತ ನೈಸರ್ಗಿಕ  ಅನಿಲ ಉತ್ಪಾದನಾ ಘಟಕ ಆರಂಭಿಸಿ ದೇಶಕ್ಕೇ ಮಾದರಿಯಾಗಿದ್ದಾರೆ..’  ಎಂದು ಪ್ರಶಂಸೆ ವ್ಯಕ್ತಪಡಿಸಿ ಈ ಘಟಕಕ್ಕೆ ಶುಭ ಹಾರೈಸಿದರು.


ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಇತರರಿಗೆ ಪ್ರೇರಣೆ ಯಾಗುವ ಕೆಲಸ ಮಾಡಿರುವುದು ಮಾದರಿ ಯೋಜನೆ ಎಂದು ಶಾಸಕ ರಾಜೇಶ್ ನಾಯ್ಕ್ ರವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ತ್ಯಾಜ್ಯ ಮುಕ್ತ, ವ್ಯಸನ ಮುಕ್ತ ಪ್ರದೇಶವನ್ನಾಗಿ ಮಾಡುವಲ್ಲಿ ಇದು ಮಹತ್ವದ ಯೋಜನೆ ಯಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ವೈ ಭರತ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಡಾ. ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತರಿದ್ದರು.

ಉನ್ನತ್ ನಾಯಕ್ ವಂದಿಸಿದರು ಹಾಗೂ ದೇವದಾಸ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.

Exit mobile version