Site icon newsroomkannada.com

ಪಂಜರ ಮೀನು ಕೃಷಿಯಿಂದ ಭರ್ಜರಿ ಆದಾಯ ಗಳಿಸಬೇಕೇ?

ವರದಿ: ಉಮೇಶ್‌ ಎಚ್‌.ಎಸ್‌. 

ಕುಂದಾಪುರ: ಕರಾವಳಿಯ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಗಲ್ಫ್‌ ದೇಶಗಳಿಗೆ ಹೋಗುವುದು ಸಾಮಾನ್ಯ. ಆದರೆ ಬೈಂದೂರು ತಾಲೂಕು ಕೋಡೆರಿಯ ಸಾಹಸಿ ಯುವಕನೊಬ್ಬ ಅಪರೂಪದ ಪಂಜರ ಮೀನು ಕೃಷಿ ಮಾಡುವುದಲ್ಲದೆ ರಾಜ್ಯದ ಇತರ ಭಾಗಗಳಲ್ಲಿಯೂ ಈ ಕೃಷಿ ಮಾಡಲು ಆಸಕ್ತ ರಾಗಿರುವರಿಗೆ ಮಾರ್ಗದರ್ಶನ ನೀಡುವ ಮಹತ್ತರ ಕೆಲಸ ಮಾಡುತ್ತಿದ್ದಾರೆ.

ಹೌದು ಬೈಂದೂರು ತಾಲೂಕಿನ ಕೋಡೇರಿಯ ರಮೇಶ್‌ ಖಾರ್ವಿ ಅವರು ಕಳೆದ 13 ವರ್ಷಗಳಿಂದ ವಿಶೇಷವಾದ ಪಂಜರ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಮೂಲಕ ಯುವ ಸಮುದಾಯಕ್ಕೆ ಪ್ರೇರಣೆಯಾಗುವ ಕೆಲಸವೊಂದನ್ನು ಮಾಡುತ್ತಿದ್ದಾರೆ.

ಹೇಗೆ ಈ ಪಂಜರ ಕೃಷಿ: ಪಂಜರ ಮೀನು ಕೃಷಿಯಲ್ಲಿ ಅಂದಾಜು 1 .50 ಲಕ್ಷ ರೂ. ಇನ್‌ ವೆಸ್ಟ್‌ ಮಾಡಿದ್ರೆ 5 ಲಕ್ಷದ ವರೆಗೂ ಆದಾಯ ಗಳಿಸಬಹುದು. ಅದೇ ಕಾರಣಕ್ಕಾಗಿ ಖಾರ್ವಿ ಅವರು ಸಮುದ್ರ ಮೀನುಗಾರಿಕೆಯೊಂದಿಗೆ ಪಂಜರ ಮೀನುಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರಮೇಶ್‌ ಖಾರ್ವಿ ಅವರು ಕೋಡೆರಿಯ ಸಮುದ್ರ ಕಿನಾರೆಗಳಲ್ಲಿ ಆ್ಯಂಕರ್‌ ನೆರವಿನಿಂದ ಕಬ್ಬಿಣದ ಪಂಜರವನ್ನಿಟ್ಟು ಬಲೆ ಅಳವಡಿಸಿ, ಮೀನು ಮರಿಗಳನ್ನು ಬಿಟ್ಟು, ನಿತ್ಯ ಆಹಾರ ಒದಗಿಸುತ್ತಾರೆ. ಮೀನುಗಾರಿಕೆಗೆ ಹೋದಾಗ ದೊರೆಯುವ ಮೀನು ವೇಸ್ಟ್‌ ಅನ್ನೇ ಮೀನುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಆಂಧ್ರದಿಂದ ಮೀನು ಮರಿಗಳನ್ನು ತಂದು ಇಲ್ಲಿ ಮೀನು ಸಾಕಣೆ ನಡೆಸುತ್ತಿದ್ದಾರೆ. ಇವರು ಹೆಚ್ಚಾಗಿ ಸೀ ಬಾಸ್‌ ತಳಿಯ ಮೀನು ಸಾಕಣೆ ಮಾಡುತ್ತಿದ್ದಾರೆ. ಇತರ ಮೀನುಗಳನ್ನು ಈ ಪಂಜರದೊಳಗೆ ಹಾಕಿದ್ರೆ ಸೀ ಬಾಸ್‌ ಮೀನು ಇತರೆ ಜಾತಿಯ ಮೀನುಗಳನ್ನು ಭೇಟೆಯಾಡಿ ತಿನ್ನುತ್ತದೆ ಇದೆ ಕಾರಣಕ್ಕಾಗಿ ಸೀಬಾಸ್‌ ಅನ್ನು ಮಾತ್ರ ಪ್ರತ್ಯೇಕವಾಗಿಟ್ಟು ಕೃಷಿ ನಡೆಸುತ್ತಿದ್ದಾರೆ. ಅದೇ ರೀತಿ ಸೀ ಬಾಸ್‌ ಸಾಕುವಾಗ ಒಂದೇ ರೀತಿಯ ಗಾತ್ರದ ಮೀನುಗಳನ್ನು ಸಾಕಬೇಕು. ಇಲ್ಲದೇ ಹೋದಲ್ಲಿ ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ಆಹಾರವಾಗಿ ತಿನ್ನುವ ಅಪಾಯವಿರುತ್ತದೆ. ಇನ್ನು ವರ್ಷದಲ್ಲಿ ಒಂದು ಮೀನು ಬೆಳೆ ತೆಗೆಯಲು ಸಾಧ್ಯವಿದೆ. ಸರ್ಕಾರದಿಂದಲೂ ಇದಕ್ಕೆ ಸಬ್ಸಿಡಿ ದೊರೆಯುತ್ತದೆ ಎನ್ನು ತ್ತಾರೆ ಖಾರ್ವಿ, ರಮೇಶ್‌ ಖಾರ್ವಿ ಅವರು ಸೀ ಬಾಸ್‌ ಅಲ್ಲದೆ ವೈಲ್ಡ್‌ ಸೀಡ್‌ (ಹೊಳೆಯಲ್ಲಿ ಸಿಗುವ ಮೀನು)ನನ್ನು ಪಂಜರದಲ್ಲಿ ಕೃಷಿ ಮಾಡುತ್ತಿದ್ದಾರೆ.

ನೀವು ಮಾಡ್ಬೇಕಾ ಇವರನ್ನು ಕಾಂಟ್ಯಾಕ್ಟ್‌ ಮಾಡಿ: ಸೀಬಾಸ್‌, ಸೇರಿದಂತೆ ಹಲವು ಜಾತಿಯ ಮೀನುಗಳನ್ನು ಸಿಹಿ ನೀರಿನಲ್ಲಿ ಯೂ ಸಾಕಲು ಸಾಧ್ಯವಿದೆ. ರಮೇಶ್‌ ಖಾರ್ವಿ ಅವರು ಹೊಸದಾಗಿ ಪಂಜರ ಮೀನುಕೃಷಿ ಮಾಡುವವರಿಗೆ ಮೀನುಮರಿ, ಪಂಜರ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟು, ಮಾರ್ಗದರ್ಶನ ಒದಗಿಸುತ್ತಾರೆ. ಅಲ್ಲದೆ ಖಾರ್ವಿ ಅವರು ಯಾರಿಗೆ ಮರಿ ನೀಡಿ ಮಾರ್ಗದರ್ಶನ ಮಾಡುತ್ತಾರೆಯೋ ಅವರಿಗೆಲ್ಲ ಮಾರುಕಟ್ಟೆಯನ್ನು ಅವರೇ ಒದಗಿಸಿಕೊಡುತ್ತಾರೆ. ಹೇಗೆಂದರೆ ಖಾರ್ವಿ ಅವರು ಒಮ್ಮೆ ಮೀನು ಮರಿ ನೀಡಿ ಕೈ ತೊಳೆದುಕೊಳ್ಳುವುದಿಲ್ಲ. ಬದಲಿಗೆ ಮೀನು ಮರಿ ನೀಡಿದ ರೈತರಿಂದಲೇ ನೇರವಾಗಿ ಕಟಾವಿನ ವೇಳೆ ಖರೀದಿ ಮಾಡುವುದು ಇವರ ವೈಶಿಷ್ಟ್ಯ. ಇವರ ಮಾರ್ಗದರ್ಶನದಲ್ಲಿ ಬೆಳೆದ ಬೆಳೆದ ಮೀನಿಗೆ ಗೋವಾ, ಮುಂಬೈ, ಬೆಂಗಳೂರಲ್ಲಿ ಒಳ್ಳೆಯ ಮಾರುಕಟ್ಟೆಯಿದೆ ಎನ್ನುತ್ತಾರೆ ಖಾರ್ವಿ. ಒಟ್ಟಿನಲ್ಲಿ ಕರಾವಳಿಯಲ್ಲಿ ಪಂಜರ ಮೀನು ಕೃಷಿ ಮೂಲಕ ಹಲವರಿಗೆ ಸ್ವ ಉದ್ಯೋಗಕ್ಕೆ ಮಾದರಿಯಾಗಿದ್ದಾರೆ.

ರಮೇಶ್‌ ಖಾರ್ವಿ ಸಂಪರ್ಕ ಸಂಖ್ಯೆ: 8105650964 (ಹೆಚ್ಚಿನ ಮಾಹಿತಿಗೆ ರಮೇಶ್‌ ಖಾರ್ವಿ ಅವರನ್ನೇ ಸಂಪರ್ಕಿಸಿ)

Exit mobile version