Site icon newsroomkannada.com

Mangalore: ಮಂಗಳೂರು ಮತ್ತೊಬ್ಬ ಬಸ್‌ ಉದ್ಯಮಿ ಆತ್ಮಹತ್ಯೆ

ಮಂಗಳೂರು: ಖಾಸಗಿ ಬಸ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ ಬಜಾಲ್‌ ನಿವಾಸಿ ಪ್ರಜ್ವಲ್‌ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಭವಾನಿ ಬಸ್‌ ಮಾಲೀಕರಾಗಿದ್ದ ದಿ. ದೇವೇಂದ್ರ ಅವರ ಎರಡನೇ ಪುತ್ರ ಮಂಗಳವಾರ ಬೆಳಗ್ಗೆ ಎಂಜಿ ರೋಡ್‌ ನಲ್ಲಿರುವ ಸ್ವಗೃಹದಲ್ಲಿ ಫ್ಯಾನ್‌ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟಕಾರಣ ತಿಳಿದುಬಂದಿಲ್ಲ. ಸಂಶಯಾಸ್ಪದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.

Exit mobile version