Site icon newsroomkannada.com

ಬಜೆಟ್‌: ಮೆಟ್ರೋಗೆ 30 ಸಾವಿರ ಕೋಟಿ ರೂ., ಮದ್ಯ ಬಲು ದುಬಾರಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 14 ನೇ ಬಾರಿಗೆ ಬಜೆಟ್‌ ಮಂಡಿಸಿದರು. ಬೆಂಗಳೂರಿಗೆ 45 ಸಾವಿರ ಕೋಟಿ ಅನುದಾನ ಘೋಷಿಸಿದ ಸಿಎಂ, ನಮ್ಮ ಮೆಟ್ರೋಗೆ 30, 000 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಕೃಷಿ ಉದ್ಯಮ ಉತ್ತೇಜಿಸಲು ನವ್ಯೋದ್ಯಮ ಯೋಜನೆಗೆ 10 ಕೋಟಿ ರೂ., ಕೃಷಿಭಾಗ್ಯ ಯೋಜನೆಯಲ್ಲಿ ನರೇಗಾ ಯೋಜನೆಯಡಿ 100 ಕೋಟಿ ರೂ., ರೈತರಿಗೆ 3ರಿಂದ 5 ಲಕ್ಷ ರೂ.ಗಳವರೆಗೆ ಅಲ್ಪಾವಧಿ ಸಾಲ ಒದಗಿಸಲಾಗುವುದು ಎಂದು ತಿಳಿಸಿದರು.

ಅಬಕಾರಿ ತೆರಿಗೆ ಶೇ. 20ರಷ್ಟು ಹೆಚ್ಚಳಕ್ಕೆ ಬಜೆಟ್‌ ನಲ್ಲಿ ನಿರ್ಧರಿಸಲಾಗಿದ್ದು, ಲೋಕೋಪಯೋಗಿ ಇಲಾಖೆಗೆ 10, 143 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ ರೂ., ಆಹಾರ ಇಲಾಖೆಗೆ 10,460 , ಮೈಸೂರು ಕಲಬುರಗಿ ಯಲ್ಲಿ ಟ್ರಾಮಾ ಸೆಂಟರ್‌ ಸ್ಥಾಪನೆಗೆ 30 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಅಬಕಾರಿ ತೆರಿಗೆ ಹೆಚ್ಚಳ: ಅಬಕಾರಿ ತೆರಿಗೆ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಇದರಿಂದ ವಿವಿಧ ಬ್ರ್ಯಾಂಡ್​ಗಳ ಮದ್ಯ ಬೆಲೆ ಹೆಚ್ಚಳವಾಗಲಿದೆ. ಬಿಯರ್​ ಮೇಲಿನ ಅಬಕಾರಿ ಸುಂಕ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕ ಶೇ. 175 ರಿಂದ 185 ಕ್ಕೆ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ.  2023-24ರ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ನಿಗದಿ ಮಾಡಿದೆ.

Exit mobile version