Site icon newsroomkannada.com

ವಿಡಿಯೋ ನೋಡಿ: ಈ ಸೇತುವೆಯಲ್ಲಿ ಹೋದ್ರೆ ಎದೆ ಝಲ್‌ ಅನ್ನೋದಂತು ಗ್ಯಾರಂಟಿ

ಸೇತುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಎರಡು ಬೆಟ್ಟಗಳ ನಡುವೆ ಇರುವ ಈ ಸೇತುವೆ ಸಾಕಷ್ಟು ಎತ್ತರದಲ್ಲಿದೆ. ಡ್ರೋನ್​​ ಮೂಲಕ ಚಿತ್ರೀಕರಿಸಿದ ಈ ವಿಡಿಯೋ ಒಂದು ಕ್ಷಣ ನಡುಕ ಹುಟ್ಟಿಸುವುದಂತೂ ಖಂಡಿತಾ.
ವೈರಲ್ ವೀಡಿಯೊದಲ್ಲಿ ಇರುವ ಸೇತುವೆಯನ್ನು ಎರಡು ಪರ್ವತಗಳ ನಡುವೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಶೆಂಗ್ಜಿಯಾಂಗ್ಜು ಕಣಿವೆಯ ಮೇಲೆ ನಿರ್ಮಿಸಲಾಗಿದೆ, 460 ಅಡಿ ಎತ್ತರವಿದ್ದು,328 ಅಡಿ ಅಂದರೆ 100 ಮೀಟರ್ ಉದ್ದವಿದೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ @gunsnrosesgirl3 ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. 12 ಸೆಕೆಂಡುಗಳ ವೀಡಿಯೊವನ್ನು ಇದುವರೆಗೆ 73,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನೂರಾರು ಜನರು ವೀಡಿಯೊಗೆ ಲೈಕ್​​ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. “ಈ ಸೇತುವೆ ಆಧುನಿಕ ತಂತ್ರಜ್ಞಾನಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ, “ನಾನು ಎಷ್ಟೋ ಸೇತುವೆಗಳನ್ನು ನೋಡಿದ್ದೇನೆ, ಆದರೆ ಇಂತಹ ಸೇತುವೆಯನ್ನು ನೋಡಿಲ್ಲ” ಎಂದು ಬರೆದುಕೊಂಡಿದ್ದಾರೆ.

Exit mobile version