main logo

ಬ್ರೇಕಿಂಗ್‌ ನ್ಯೂಸ್:‌ ಮಂಗಳೂರಿನಲ್ಲಿ ಕೋವಿಡ್‌ ಗೆ ಮತ್ತೊಂದು ಬಲಿ

ಬ್ರೇಕಿಂಗ್‌ ನ್ಯೂಸ್:‌ ಮಂಗಳೂರಿನಲ್ಲಿ ಕೋವಿಡ್‌ ಗೆ ಮತ್ತೊಂದು ಬಲಿ

ಮಂಗಳೂರು: ಕರ್ನಾಟಕದಲ್ಲಿ ಮತ್ತೋರ್ವ ಕೊರೋನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉಸಿರಾಟದ ಸಮಸ್ಯೆಯಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಭಾರತ ಮೂಲದ‌ 40 ವರ್ಷ‌ದ ವ್ಯಕ್ತಿ ಮೃತಪಟ್ಟಿದ್ದಾನೆ. 2 ದಿನಗಳ ಹಿಂದೆ ಮೃತ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ವೆನ್ಲಾಕ್​ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು(ಡಿಸೆಂಬರ್ 22) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಇನ್ನು ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಲಸೆ ಕಾರ್ಮಿಕನಾಗಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ ಉಸಿರಾಟದ ತೊಂದರೆಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಕೋವಿಡ್ ನಿಂದಲೇ ಸಾವು ಆಗಿದೆಯಾ ಎಂದು ವೈದ್ಯರು ದೃಢಪಡಿಸಬೇಕಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

error: Content is protected !!