ಉಜಿರೆ : “ಮಾತೃಭಾಷೆ ಮತ್ತು ರಾಜ್ಯ ಭಾಷೆ ಎರಡೂ ಭಾಷೆಗಳನ್ನು ಸಮಾನವಾಗಿ ಕಾಣಬೇಕು. ನಮ್ಮ ಜೀವನದಲ್ಲಿ ವಿದ್ಯೆಯ ಜೊತೆಗೆ ವಿನಯವು ಮುಖ್ಯ, ವಿನಯವಿಲ್ಲವಾದಲ್ಲಿ ವಿದ್ಯೆಯು ವ್ಯರ್ಥವಾಗುತ್ತದೆ.” ಎಂದು ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜು, ಉಜಿರೆಯ ಕನ್ನಡ ಉಪನ್ಯಾಸಕರಾದ ಮಹಾವೀರ್ ಜೈನ್ ಹೇಳಿದರು.
ಇವರು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ”ಕರ್ನಾಟಕ ೫೦ರ ಸಂಭ್ರಮ” ಎಂಬ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಜಿಲ್ಲೆಗಳ ವೇಷಭೂಷಣ, ಸಮೂಹ ಗಾಯನ, ಕಗ್ಗ, ವಚನ, ಕಥೆ, ಕವನಗಳ ಪ್ರಸ್ತುತಿ, ಹುಲಿ ಕುಣಿತ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ಕೆ. ಜಿ ವಹಿಸಿದ್ದರು. ವಿದ್ಯಾರ್ಥಿಗಳಾದ ತನುಶ್ರೀ ಮತ್ತು ಸಮ್ಮೇದ್ ಕಾರ್ಯಕ್ರಮ ನಿರೂಪಿಸಿ, ಪೃಥ್ವಿ ಸ್ವಾಗತಿಸಿ, ವಂಶಿ ವಂದಿಸಿದರು.