ಮಂಗಳೂರು: ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದೆ. ಡಿ.26ರಂದು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ xonocikonoci10@beeble.com ನಿಂದ ಇಮೇಲ್ ಬಂದಿದೆ.
ಈ ಮೇಲ್ ನಲ್ಲಿ ಒಂದು ವಿಮಾನದಲ್ಲಿ ಸ್ಫೋಟಕಗಳಿವೆ. ಅದೇ ರೀತಿ ವಿಮಾನ ನಿಲ್ದಾಣದ ಒಳಗೆ ಕೂಡ. ಸ್ಫೋಟಗಳನ್ನು ಇರಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ನಿಮ್ಮನ್ನೆಲ್ಲ ಕೊಲ್ಲುತ್ತೇವೆ. ನಾವು “ಫನ್ನಿಂಗ್”.ಭಯೋತ್ಪಾದಕ ಗುಂಪಿನವರು ಎಂದು ಸಂದೇಶ ಕಳಿಸಲಾಗಿದ್ದು ಸಂದೇಶವನ್ನು ಡಿ. 27ರಂದು 11.20ಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಗಮನುಸಿದ್ದಾರೆ.
ನಾವು ಸಂದೇಶ ಬಂದ ಬಳಿಕ ವಿಮಾನ ನಿಲ್ದಾಣದ ಆವರಣದ ಹೊರಗೆ ಭದ್ರತೆಯನ್ನು ಬಿಗಿಗೊಳಿಸಿದ್ದೇವೆ, ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದೇವೆ, ಎಎಸ್‌ಸಿ ಚೆಕ್ ಮತ್ತು ಬಿಡಿಡಿಎಸ್ ಪರಿಶೀಲನೆಯನ್ನು ತಕ್ಷಣವೇ ನಡೆಸಿದ್ದೇವೆ. ಪಿಐ ಬಜ್ಪೆ ಅವರ ಉಪಸ್ಥಿತಿಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿದ್ದೇವೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳ (ಅದಾನಿ) ದೂರಿನ ಮೇರೆಗೆ ಬಜ್ಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.