Site icon newsroomkannada.com

ಕಾಂಗ್ರೆಸ್‌ ಸೋಲಿನ ವಿಮರ್ಷೆಗೆ ನಡೆದ ಸಭೆಯಲ್ಲಿ ಮಾರಾಮಾರಿ: ಚೇರ್‌ ಎಸೆದು ಬಡಿದಾಡಿದ ಮುಖಂಡರು

ಕಡಬ: ಕಡಬ ಬ್ಲಾಕ್‌ ಕಾಂಗ್ರೆಸ್‌ನ ಪರಾಮರ್ಶೆ ಸಭೆಯಲ್ಲಿ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿಯಾದ ಘಟನೆ ಕಡಬ ಅಂಬೇಡ್ಕರ್ ಭವನದಲ್ಲಿ ಜು.14ರಂದು ಸಭೆ ನಡೆದಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರೆನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಎಂಬ ಆರೋಪದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಉಚ್ಛಾ   ನೆಗೊಳಗಾದ ನಾಯಕರು ಈ ಸಭೆಗೆ ಆಗಮಿಸಿದ್ದ ವೇಳೆ ಜಿ.ಕೃಷ್ಣಪ್ಪ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.

ಸ್ವತಃ ಕೃಷ್ಣಪ್ಪ ಅವರೇ ಉಚ್ಛಾಟಿತ ನಾಯಕರಲ್ಲಿ, ನೀವು ಈ ಸಭೆಗೆ ಯಾಕೆ ಬಂದಿದ್ದೀರಿ?, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ಪ್ರಶ್ನಿಸಿದರೆನ್ನಲಾಗಿದೆ. ಕೃಷ್ಣಪ್ಪ ಬೆಂಬಲಿಗರಾದ ಇತರ ನಾಯಕರು ಕೂಡ ಇದನ್ನು ಪ್ರಶ್ನಿಸಿ ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಛಾಟಿತರು ಇರಲು ಅವಕಾಶ ಇದೆಯೇ ಎಂದು ಕೇಳಿದರೆನ್ನಲಾಗಿದೆ. ಈ ವೇಳೆ ಉಭಯ ತಂಡಗಳ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿದ್ದು, ಮಾಹಿತಿ ಪಡೆದ ಪೊಲೀ ಸರು ಮಧ್ಯಪ್ರವೇಶಿಸದರೆನ್ನಲಾಗಿದೆ.

ಕೃಷ್ಣಪ್ಪ ಬಣದ ಕೆಲವು ಮಂದಿ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ. ಈ ಕುರಿತಂತೆ ವಿಡೀಯೋಗಳು ಕೂಡ ಹರಿದಾಡುತ್ತಿದೆ. ನಂದಕುಮಾರ್ ಬಣದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಅಂಬೇಡ್ಕರ್ ಭವನದ ಚೇರ್‌ಗಳನ್ನು ಕೂಡ ಎಳೆದಾಡಿದ್ದು, ಪೊಲೀಲಿಸರು ಆಗಮಿಸಿ ಇತ್ತಂಡಗಳಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದರೆನ್ನಲಾಗಿದೆ.

Exit mobile version