ಬೆಳ್ತಂಗಡಿ: ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ದುರಂತ ಸಂಭವಿಸಿದೆ. 55 ವರ್ಷದ ಸ್ವಾಮಿ ಹಾಗೂ ಮತ್ತೊಬ್ಬ ಕಾರ್ಮಿಕ ದುರ್ಮರಣ ಹೊಂದಿದ್ದು, ಮತ್ತೊಬ್ಬ ಕಾರ್ಮಿಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಶೀರ್ ಎಂಬುವರಿಗೆ ಸೇರಿದ ಸಾಲಿಡ್ ಫೈರ್ ವರ್ಕ್ಸ್ ಪಟಾಕಿ ಗೋದಾಮಿನಲ್ಲಿ ಅವಘಡ ಸಂಭವಿಸಿದೆ. ಪಟಾಕಿ ಸ್ಫೋಟದ ರಭಸಕ್ಕೆ ಗೋದಾಮಿನಿಂದ ಹೊರಗೆ ಕಾರ್ಮಿಕ ಹಾರಿಬಿದ್ದಿದ್ದಾರೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.