ಬೆಂಗಳೂರು: ಬೆಂಗಳೂರಿನ (Bangalore News) ವೈಲ್ಡ್ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwara Cafe) ಗುರುವಾರ ಮಧ್ಯಾಹ್ನ ಸಂಭವಿಸಿದ ಸ್ಪೋಟದ ಸಿಸಿಟಿವಿ ಫೂಟೇಜ್ (CC TV Footage) ಲಭ್ಯವಾಗಿದೆ. ಇಲ್ಲಿ ನಡೆದ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಲ್ಲಿ ದೊಡ್ಡ ಸದ್ದಿನೊಂದಿಗೆ ಸ್ಫೋಟ (Blast in Bengaluru) ಸಂಭವಿಸುತ್ತದೆ. ಒಮ್ಮೆಗೇ ಹೊಗೆ ಆವರಿಸಿಕೊಳ್ಳುತ್ತದೆ. ಜನರು ಭಯದಿಂದ ಓಡಿ ಹೋಗುತ್ತಾರೆ. ಮಧ್ಯಾಹ್ನ 12.55 ರ ಹೊತ್ತಿಗೆ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಆ ಜಾಗದಲ್ಲಿದ್ದ ಸುಮಾರು ಎಂಟು ಮಂದಿ ಗಾಯಗೊಂಡಿದ್ದಾರೆ. ಒಬ್ಬ ಮಹಿಳೆಯಂತೂ ಗಂಭೀರ ಗಾಯಗೊಂಡಿದ್ದಾರೆ. ಇದು ಒಂದು ಕಸದ ತೊಟ್ಟಿಯಲ್ಲಿ ಸಂಭವಿಸಿದ ಬ್ಲಾಸ್ಟ್ ನಂತೆ ಕಾಣಿಸುತ್ತದೆ.