main logo

ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಯುವತಿ

ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಯುವತಿ

ಬೆಂಗಳೂರು: ಜಾಲಹಳ್ಳಿಯ ಯುವತಿಯೊಬ್ಬಳು ‘ಬ್ಲಾಕ್ ಮ್ಯಾಜಿಕ್ ನಿಂದ ಮೋಸ ಹೋಗಿ ಲಕ್ಷ ಲಕ್ಷ ದುಡ್ಡು ಕಳೆದುಕೊಂಡಿರುವುದು ವರದಿಯಾಗಿದೆ. ‘ನಿನ್ನ ಮಾಜಿ ಪ್ರಿಯಕರ ಆದಷ್ಟು ಬೇಗ ನಿನ್ನನ್ನು ಬಂದು ತಲುಪುತ್ತಾನೆ, ಮತ್ತೆ ನಿಮ್ಮ ಪ್ರೀತಿ ಚಿಗುರೊಡೆಯುತ್ತದೆ’ ಎಂದು ಭರವಸೆ ನೀಡಿದ್ದ ಜ್ಯೋತಿಷಿಯಿಂದ ಮೋಸ ಹೋಗಿ 8.2 ಲಕ್ಷ ರೂಪಾಯಿಯನ್ನು ಯುವತಿ ಕಳೆದುಕೊಂಡಿದ್ದಳು. ಬ್ರೇಕಪ್​​ನಿಂದ ನೊಂದಿದ್ದ ಯುವತಿ ತನ್ನ ಗೆಳೆಯನೊಬ್ಬನ ಸಹಾಯದಿಂದ ಆನ್ಲೈನ್​​ ಮೂಲಕ ವಶೀಕರಣ ಮಾಡಿಸುವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಳು.

ಡಿಸೆಂಬರ್ 22 ರಂದು ವಶೀಕರಣದ ಮೊದಲ ಹಂತವಾಗಿ ಮಾಜಿ ಪ್ರಿಯಕರ ಹಾಗೂ ಆತನ ಪೋಷಕರ ಮೇಲೆ ಮಾಟಮಂತ್ರದ ಆಚರಣೆಗಳನ್ನು ಮಾಡಲು 2.4 ಲಕ್ಷಗಳನ್ನು ಆನ್ಲೈನ್​​ ಮೂಲಕ ಪಾವತಿಸಿದ್ದಳು. ಆದಾಗ್ಯೂ, ಹಣಕಾಸಿನ ಬೇಡಿಕೆಗಳು ನಿಲ್ಲಲಿಲ್ಲ, ಕೆಲವು ದಿನಗಳ ನಂತರ, ಹೆಚ್ಚುವರಿ ರೂ. 1.7 ಲಕ್ಷ ನೀಡಲು ಬೇಡಿಕೆ ಇಟ್ಟಿದ್ದ ಜ್ಯೋತಿಷಿ, ಇದಲ್ಲದೇ ಹಣ ನೀಡದಿದ್ದರೆ ಮಾಜಿ ಪ್ರಿಯಕರನಿಗೆ ಈ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದ, ಯುವತಿ ಹೆದರಿ ಒತ್ತಡಕ್ಕೆ ಮಣಿದು ಜನವರಿ 10ರಂದು 4.1 ಲಕ್ಷ ರೂ. ಪಾವತಿಸಿದ್ದಳು.
ಕೊನೆಗೆ ಆರ್ಥಿಕ ನಷ್ಟದಿಂದಾಗಿ ಆಕೆಯ ಪೋಷಕರ ವರೆಗೆ ಈ ವಿಷಯ ತಿಳಿದು ಜಾಲಹಳ್ಳಿ ಪೊಲೀಸ್​​​ ಠಾಣೆಯಲ್ಲಿ ಜ್ಯೋತಿಷಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!