ಮುಂಬೈ: ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಲೋಕಸಭಾ ಸದಸ್ಯ ಕಿರಿಟ್ ಸೋಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸ್ಥಳೀಯ ಮರಾಠಿ ನ್ಯೂಸ್ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ಈ ವಿಷಯ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ, ಕಿರಿಟ್ ಸೋಮಯ್ಯ ಅವರ ಬಗ್ಗೆ ಟೀಕೆಗಳು ಕೇಳಿ ಬಂದಿವೆ. ದೂರುಗಳು ಕೂಡ ದಾಖಲಾಗಿದೆ.
ಆದರೆ ಕಿರಿಟ್ ಸೋಮಯ್ಯ ಅವರು ವಿಡಿಯೋ ನನ್ನದಲ್ಲ ನನ್ನ ಹೆಸರಿನಲ್ಲಿ ತಿರುಚಿದ ವಿಡಿಯೋಗಳನ್ನು ಬಿತ್ತರಿಸಲಾಗಿದೆ. ನಾನು ಯಾವುದೇ ಮಹಿಳೆಯರಿಗೆ ಕಿರುಕುಳ ಕೊಟ್ಟಿಲ್ಲ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಉಪಮುಖ್ಯ ಮಂತ್ರಿಯೂ ಆಗಿರುವ ಗೃಹಸಚಿವ ದೇವೇಂದ್ರ ಫಡ್ನವಿಸ್ ಅವರಿಗೆ ಟ್ವೀಟ್ ಮೂಲಕ ದೂರು ಸಲ್ಲಿಸಿದ್ದಾರೆ.
ವಿಡಿಯೋದಲ್ಲಿ ಕಿರಿಟ್ ಸೋಮಯ್ಯ ಎನ್ನಲಾದ ವ್ಯಕ್ತಿ ಮಹಿಳೆಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡುತ್ತಾ ಆಶ್ಲೀಲ ಹಾವಭಾವ ಪ್ರದರ್ಶಿಸಿ ಬೆತ್ತಲೆ ದೇಹ ಪ್ರದರ್ಶನ ಮಾಡುತ್ತಿರುವುದು ದಾಖಲಾಗಿದೆ. ಒಂದು ಬಾರಿ ಶಾಸಕ ಎರಡು ಬಾರಿ ಬಿಜೆಪಿಯಿಂದ ಲೋಕಸಭೆ ಸದಸ್ಯರಾಗಿದ್ದ ಕಿರಿಟ್ ಸೋಮಯ್ಯ ಮುಂಬೈ ಉತ್ತರ ಭಾಗದ ರಾಜಕಾರಣಿಯಾಗಿದ್ದಾರೆ.