ಮಂಗಳೂರು : ನನಗೆ ಲೋಕಸಭಾ ಚುನಾವಣೆ ಸಂಬಂಧ ದ.ಕ ಜಿಲ್ಲೆಯ ಜವಾಬ್ದಾರಿ ಕೊಟ್ಟಿದ್ದಾರೆ. ನಾನು 15 ದಿನಗಳ ಒಳಗೆ ಅಭ್ಯರ್ಥಿ ಬಗ್ಗೆ ಪ್ರಾಥಮಿಕ ವರದಿ ಕೊಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ದ.ಕ ಲೋಕಸಭಾ ಕ್ಷೇತ್ರ ನಾವು ಗೆಲ್ಲಲೇ ಬೇಕು. ಇದಕ್ಕಾಗಿ ಇವತ್ತಿನಿಂದ ಆ ಪ್ರಕ್ರಿಯೆಯನ್ನ ನಾನು ಆರಂಭಿಸ್ತಾ ಇದೀನಿ ಎಂದರು. ಈಗ ಜೆಡಿಎಸ್ ಬಿಜೆಪಿ ಜೊತೆ ಹೊರಟು ಹೋಯ್ತಲ್ಲ. ಜೆಡಿ…ಎಸ್ ಎಲ್ಲೋಯ್ತು ಗೊತ್ತೇ ಇಲ್ಲ, ಬಿಜೆಪಿ ಕೋಮುವಾದಿ ಅಂತಿದ್ರು. ಈಗ ಅದೇ ಕೋಮುವಾದಿಗಳ ಜೊತೆ ಇವರು ಹೋಗಿದ್ದಾರೆ.
ದ.ಕ ಜಿಲ್ಲೆಯಲ್ಲಿ ಬಿಜೆಪಿ ಅಭಿವೃದ್ಧಿ ಮೇಲೆ ಗೆದ್ದಿಲ್ಲ. ಇವರು ಭಾವನಾತ್ಮಕ ವಿಚಾರಗಳ ಮೇಲೆ ಇವರು ಗೆದ್ದಿದ್ದಾರೆ ಎಂದರು. ನಮಗೆ ಮಂಗಳೂರಿನಲ್ಲಿ ಜನರ ಮನಸ್ಸು ಗೆಲ್ಲಲು ಈ ಬಾರಿ ಅವಕಾಶ ಇದೆ. ಜನಾರ್ದನ ಪೂಜಾರಿ ಮಾರ್ಗದರ್ಶನ ಕೂಡ ಕೇಳಲಿದ್ದೇನೆ. ಇಡೀ ರಾಜ್ಯದ ಹಲವು ಜೆಡಿಎಸ್ ಮುಖಂಡರು ನನ್ನ ಜೊತೆ ಸಂಪರ್ಕ ಇದ್ದಾರೆ ಎಂದು ಹೇಳಿದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಿಂದ ಕೆಲವರಿಗೆ ನೋವಾಗಿದೆ. ಹೀಗಾಗಿ ತತ್ವ ಸಿದ್ದಾಂತಕ್ಕೆ ಧಕ್ಕೆಯಾದಾಗ ನಿರ್ಧಾರ ತೆಗೋತ್ತಾರೆ. ಮಂಗಳೂರಿನ ಹಲವು ಜೆಡಿಎಸ್ ಮುಖಂಡರು ಕೂಡ ಸಂಪರ್ಕದಲ್ಲಿ ಇದ್ದಾರೆ. ನೀವು ನೋಡ್ತೀರಾ, ಸದ್ಯದಲ್ಲಿ ಅವರು ನಿರ್ಧಾರ ತೆಗೋತ್ತಾರೆ ಎಂದು ಹೇಳಿದರು.
ಪ್ರಣವಾನಂದ ಸ್ವಾಮೀಜಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಣವಾನಂದ ಸ್ವಾಮೀಜಿ ನಮ್ಮ ಸಮುದಾಯದ ನಾಯಕ ಅಲ್ಲ. ಸುಮ್ಮನೆ ಬುರುಡೆ ಬಿಟ್ಟುಕೊಂಡು ಓಡಾಡೋದಲ್ಲ. ಪ್ರಣವಾನಂದ ಹಿನ್ನೆಲೆ ಒಮ್ಮೆ ನೀವು ಕೆದಕಿದ್ರೆ ಒಳ್ಳೆಯದು ಎಂದರು.
ಬಿ.ಕೆ.ಹರಿಪ್ರಸಾದ್ ಅವರು ಹಿಂದುಳಿದ ವರ್ಗದ ಕಾಳಜಿಯಲ್ಲಿ ಮಾತನಾಡ್ತಾರೆ. ಆದರೆ ಪ್ರಣವಾನಂದ ಪಬ್ಲಿಸಿಟಿ ತೆಗೋಳೋಕೆ ಮಾಡ್ತಾ ಇರೋದು. ಯಾರೇ ಸಮಾಜವನ್ನು ಹಾದಿ ತಪ್ಪಿಸಿದ್ರೂ ಅಂಥವರನ್ನು ಕಟ್ ಮಾಡಬೇಕು. ನಾನು ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ, ಅದು ಅಸಹ್ಯ. ಇಂಥ ಕಿಡಿಗೇಡಿಗಳನ್ನ ನಾನು ಹೇಟ್ ಮಾಡ್ತೀನಿ ಎಂದು ಕಿಡಿಕಾರಿದರು.