Site icon newsroomkannada.com

ಅಬ್ಬಬ್ಬಾ ಒಂದೇ ದಿನ 31 ಸಾವಿರ ರೂ. ಮೊತ್ತದ ಬಿರಿಯಾನಿ ಆರ್ಡರ್‌, ಇಲ್ಲಿದೆ ನೋಡಿ ಅಚ್ಚರಿಯ ವಿವರ

ನವದೆಹಲಿ: ಪ್ರತಿ ವರ್ಷ ಜುಲೈ 2 ರಂದು ಅಂತರರಾಷ್ಟ್ರೀಯ ಬಿರಿಯಾನಿ ದಿನ ಆಚರಿಸಲಾಗುತ್ತಿದೆ. ಇದಕ್ಕೂ ಮುನ್ನ ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಶುಕ್ರವಾರ ಭಾರತೀಯರು ಕಳೆದ 12 ತಿಂಗಳಲ್ಲಿ 7.6 ಕೋಟಿ ಬಿರಿಯಾನಿ ಆರ್ಡರ್‌ಗಳನ್ನು ಮಾಡಿದ್ದಾರೆ ಎಂದು ಹೇಳಿದೆ.  ಕಂಪನಿಯ ಪ್ರಕಾರ, ದೇಶದಾದ್ಯಂತ ಜನರು ಪ್ರತಿ ನಿಮಿಷಕ್ಕೆ 219 ಬಿರಿಯಾನಿ ಆರ್ಡರ್‌ಗಳನ್ನು ಮಾಡಿದ್ದಾರೆ. ಸುಗಂಧಭರಿತ ‘ಲಕ್ನೋವಿ ಬಿರಿಯಾನಿ’ಯಿಂದ ಹಿಡಿದು ಮಸಾಲೆಯುಕ್ತ ‘ಹೈದರಬಾದಿ ದಮ್ ಬಿರಿಯಾನಿ’ ಮತ್ತು ಸುವಾಸನೆ ಹೊಂದಿದ ‘ಕೋಲ್ಕತ್ತಾ ಬಿರಿಯಾನಿ’, ಪರಿಮಳಯುಕ್ತ ವಿಶೇಷ ಸ್ವಾದದ ‘ಮಲಬಾರ್ ಬಿರಿಯಾನಿ’ವರೆಗೆ ಈ ಪಟ್ಟಿಯಲ್ಲಿದೆ. Swiggy ನ ಆರ್ಡರ್ ವಿಶ್ಲೇಷಣೆಯು 2023 ರ ಮೊದಲಾರ್ಧದಿಂದ ಬಿರಿಯಾನಿ ಆರ್ಡರ್ ಮಾಡುವ ಜನರ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. 2022 ರ ಇದೇ ಅವಧಿಗೆ ಹೋಲಿಸಿದರೆ ಬಿರಿಯಾನಿ ಆರ್ಡರ್‌ಗಳಲ್ಲಿ ಶೇಕಡಾ 8.26 ರಷ್ಟು ಬೆಳವಣಿಗೆಯಾಗಿದೆ.

ದೇಶಾದ್ಯಂತ 2.6 ಲಕ್ಷಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳು ಸ್ವಿಗ್ಗಿ ಮೂಲಕ ಬಿರಿಯಾನಿ ಒದಗಿಸಿದೆ. ಬಿರಿಯಾನಿ ಬಳಕೆಯಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ, ಈ ವರ್ಷದ ಜೂನ್‌ವರೆಗೆ 7.2 ಮಿಲಿಯನ್ ಆರ್ಡರ್ಗಳನ್ನು ಕಂಪನಿ ಪಡೆದಿದೆ. ಬೆಂಗಳೂರು ಸುಮಾರು 5 ಮಿಲಿಯನ್ ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸುಮಾರು 3 ಮಿಲಿಯನ್ ಆರ್ಡರ್‌ಗಳೊಂದಿಗೆ ಚೆನ್ನೈ ಮೂರನೇ ಸ್ಥಾನದಲ್ಲಿದೆ ಎಂದು ಕಂಪನಿ ಉಲ್ಲೇಖಿಸಿದೆ. ಚೆನ್ನೈನ ಬಿರಿಯಾನಿ ಪ್ರಿಯರೊಬ್ಬರು ಒಂದೇ ಆರ್ಡರ್‌ನಲ್ಲಿ 31, 532 ಸಾವಿರ ರೂ.ಗಳ ಬಿರಿಯಾನಿ ಆರ್ಡರ್‌ ಮಾಡಿ ಚಾಂಪಿಯನ್‌ ಆಗಿದ್ದಾರೆ. 6.2 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳೊಂದಿಗೆ, ‘ದಮ್ ಬಿರಿಯಾನಿ’ ನಿರ್ವಿವಾದ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Exit mobile version