ಮಂಗಳೂರು: ಬೈಕಂಪಾಡಿ ಎಪಿಎಂಸಿ ಕಟ್ಟಡದ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳದ ಮನು ಸೆಬಾಸ್ಟಿಯನ್ (33) ಎಂಬಾತನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ
ಆ. 17ರಂದು 45 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಶವ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಮತ್ತು ಈ ಸಾವಿನ ಬಗ್ಗೆ ಅನುಮಾನಗಳು ಎದ್ದಿದ್ದವು.
ಮೃತ ವ್ಯಕ್ತಿಯ ಮೈಯಲ್ಲಿ ಗಾಯದ ಗುರುತು ಕಂಡು ಬಂದ ಹಿನ್ನಲೆಯಲ್ಲಿ ಕೊಲೆ ಶಂಕೆ ಮೂಡಿತ್ತು. ಹಾಗಾಗಿ ಈ ಪ್ರಕರಣದ ತನಿಖೆ ಮುಂದುವರಿಸಿದಾಗ ಕಣ್ಣೂರಿನ ನಿವಾಸಿ ಮನು ಸೆಬಾಸ್ಟಿಯನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.