main logo

ಜೀವಂತ ನಾಗರ ಹಿಡಿದು ಸ್ಟೇಜ್‌ ಶೋ: ಮುಂದಾಗಿದ್ದು ಘೋರ ದುರಂತ

ಜೀವಂತ ನಾಗರ ಹಿಡಿದು ಸ್ಟೇಜ್‌ ಶೋ: ಮುಂದಾಗಿದ್ದು ಘೋರ ದುರಂತ

ಪಾಟ್ನಾ: ಶಿವ ದೇವರ ಗೆಟಪ್‌ನಲ್ಲಿ ವೇಷಧರಿಸಿ ಕೊರಳಲ್ಲಿ ಜೀವಂತ ನಾಗರ ಹಾಕಿಕೊಂಡು ಪೋಸ್‌ ನೀಡುತ್ತಿದ್ದ ವ್ಯಕ್ತಿಯೊಬ್ಬರು ಅದರಿಂದ ಕಚ್ಚಿಸಿಕೊಂಡು ಮೃತಪಟ್ಟಿದ್ದಾರೆ.

ಮೃತರನ್ನು ಮಾಧೇಪುರ ಜಿಲ್ಲೆಯ ಖುರ್ದಾ ಗ್ರಾಮದ ಮುಖೇಶ್ ಕುಮಾರ್ ರಾಮ್ (30) ಎಂದು ಗುರುತಿಸಲಾಗಿದೆ. ಮುಕೇಶ್ ಅವರು ರಾಮ್ ಲೀಲಾ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಟೇಜ್ ಶೋ ನೀಡುತ್ತಿದ್ದರು. ಮುರಳಿಗಂಜ್ ಬ್ಲಾಕ್‌ನಲ್ಲಿರುವ ‘ಅಖಂಡ ಅಸ್ತಂ’ ಸಂದರ್ಭದಲ್ಲಿ ಖುರ್ದಾದಲ್ಲಿರುವ ಮಾ ದುರ್ಗಾ ದೇವಸ್ಥಾನದಲ್ಲಿ ಸ್ಟೇಜ್‌ ಶೋ ಆಯೋಜಿಸಲಾಗಿದ್ದು, ಈ ವೇಳೆ ]ಮುಖೇಶ್ ಶಿವನ ವೇಷ ಧರಿಸಿ, ಕೊರಳಲ್ಲಿ ರಾಜ ನಾಗರಹಾವು ಧರಿಸಿದ್ದರು. ಈ ವೇಳೆ ಮುಖೇಶ್‌ ಅವರಿಗೆ ಹಾವು ಕಚ್ಚಿತ್ತು. ಬಳಿಕ ಕಾರ್ಯಕ್ರಮದ ಆಯೋಜಕರು ಅವರನ್ನು ಮುರಳಿಗಂಜ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಅಲ್ಲಿಂದ ವೈದ್ಯರು ಅವರನ್ನು ಸದರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮುಖೇಶ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಬಳಿಕ ಕಾರ್ಯಕ್ರಮ ಸಂಘಟಕರು ಆತನ ಶವವನ್ನು ಮುರಳಿಗಂಜ್‌ನ ಆರೋಗ್ಯ ಕೇಂದ್ರದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆಸ್ಪತ್ರೆ ಉಸ್ತುವಾರಿ ಲಾಲ್ ಬಹದ್ದೂರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!