Site icon newsroomkannada.com

ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮನಸೂರೆಗೊಂಡ ಭರತ ನಾಟ್ಯ ವೈಭವ

ಮಂಗಳೂರು: ಕೆ. ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ, ದೇರಳೆಕಟ್ಟೆ ಇದರ ವತಿಯಿಂದ ಇತ್ತೀಚೆಗೆ ನಡೆದಂತಹ ‘ವಿಕಿರಣ ಜೀವಶಾಸ್ತ್ರದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನ’ದ ಕೊನೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿ ಪುತ್ತೂರು ಇದರ ಕಲಾವಿದರಿಂದ ಭರತನಾಟ್ಯ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಅಲ್ಲದೆ ವಿದ್ವಾನ್ ಗಿರೀಶ್ ಕುಮಾರ್ , ಸೌಜನ್ಯ ಪಡ್ವೆಟ್ನಾಯ, ಅಪೂರ್ವ ಗೌರಿ ದೇವಸ್ಯ, ಅಕ್ಷತಾ ಮತ್ತು ಪ್ರಣಮ್ಯ ಇವರು ಭಾಗವಹಿಸಿದ್ದರು.

ದೀಪಕ್ ಕುಮಾರ್ ಹಾಗೂ ಪ್ರೀತಿಕಲಾ ದಂಪತಿಯ ಪ್ರಾರಂಭದ ನೃತ್ಯ- ಮಹಾದೇವ ಶಿವ ಶಂಭೋ ಜನರ ಮನಸ್ಸೂರೆಗೊಂಡಿತು. ನಂತರದ ಸಂಪೂರ್ಣ ರಾಮಾಯಣ ಸುಮಾರು ಒಂದು ಗಂಟೆಯ ಕಾಲ ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತು. ರಾಮಾಯಣದ ಪ್ರತಿಯೊಂದು ಸನ್ನಿವೇಶ ಹಾಗೂ ಪಾತ್ರಗಳು ಪ್ರೇಕ್ಷಕರಿಗೆ ಅರ್ಥವಾಯಿತು- ಇಷ್ಟವಾಯಿತು. ಕಾರ್ಯಕ್ರಮದ ನಂತರ ಕಲಾವಿದರೊಂದಿಗೆ ಸಂವಾದ ನಡೆದು ಪ್ರೇಕ್ಷಕರು ಈ ವಿಚಾರವನ್ನು ತಿಳಿಸಿ ತಮ್ಮ ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮದ ನಿರ್ವಾಹಕರಾದ ಡಾ. ಸುರೇಶ ಶೆಟ್ಟಿ ಮತ್ತು ಡಾ. ನಿರೀಕ್ಷಾ ಶೆಟ್ಟಿ ಉಪಸ್ಥಿತರಿದ್ದರು.

Exit mobile version