Site icon newsroomkannada.com

ಬಿಗ್‌ ಬ್ರೇಕಿಂಗ್‌: ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್‌, ಸ್ವಾಮಿನಾಥನ್‌ಗೆ ಭಾರತ ರತ್ನ

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್(PV Narasimha Rao), ಚೌಧರಿ ಚರಣ್ ಸಿಂಗ್ (Chaudhary Charan Singh) ಮತ್ತು ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್‌ (MS Swaminathan) ಅವರಿಗೆ ಭಾರತರತ್ನ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಸರ್ಕಾರ ಐವರು ಸಾಧಕರಿಗೆ ಭಾರತ ರತ್ನ (Bharat Ratna )ಘೋಷಿಸಿದೆ.
ಈ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ಗೆ ಘೋಷಣೆ ಮಾಡಲಾಗಿತ್ತು. ನಂತರ ಮಾಜಿ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿಗೆ ಭಾರತ ರತ್ನ ಘೋಷಿಸಲಾಗಿತ್ತು
ಔಧರಿ ಚರಣ್ ಸಿಂಗ್ 979 ಜುಲೈ 28 ರಿಂದ 1980ರ ಜನವರಿ 14ರವರೆಗೆ ಪ್ರಧಾನಿಯಾಗಿದ್ದರೆ ಪಿವಿ ನರಸಿಂಹ ರಾವ್ 1991ರ ಜೂನ್‌ 21 ರಿಂದ 1996 ಮೇ 16ರವರೆಗೆ ಪ್ರಧಾನಿಯಾಗಿದ್ದರು.

Exit mobile version