ಮಂಗಳೂರು: ವಂಚನೆ ಪ್ರಕರಣದ ಆರೋಪಿಯಾಗಿರುವ, ಚೈತ್ರ ಕುಂದಾಪುರ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ‘ಚೈತ್ರ ಕುಂದಾಪುರ ನಮ್ಮ ಸಂಘಟನೆಯವರಲ್ಲ. ಉತ್ತಮ ವಾಗ್ಮಿ ಎಂಬ ಕಾರಣಕ್ಕೆ ಭಾಷಣಕ್ಕೆ ಕರೆಸಿಕೊಳ್ಳುತ್ತಿದ್ದೆವು ಅಷ್ಟೆ. ಇಂತಹ ಘಟನೆಗಳಿಗೆ ನಮ್ಮ ಸಂಘಟನೆ ಆಸ್ಪದ ಕೊಡೋದಿಲ್ಲ’ ಎಂದು ಹೇಳಿದ್ದಾರೆ.
ಈ ವಂಚನೆ ವಿಚಾರ ಎರಡು ತಿಂಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿತ್ತು. ವಜ್ರದೇಹಿ ಮಠದ ಸ್ವಾಮೀಜಿಗಳು ನನ್ನೊಂದಿಗೆ ಈ ವಿಚಾರವನ್ನ ಹಂಚಿಕೊಂಡಿದ್ರು. ನಿಮ್ಮ ಪಾತ್ರ ಇಲ್ಲವೆಂದ ಮೇಲೇ ತಲೆ ಕೆಡಿಸಿಕೊಳ್ಳಬೇಡಿ ಎಂದು ನಾನು ಸ್ವಾಮೀಜಿಯವರಿಗೆ ಹೇಳಿದ್ದೆ ಎಂದರು.