ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಬೇಂಕ್ಯದಲ್ಲಿ ಸುಭಾಷ್ ಯುವಕ ಮಂಡಲದ ವತಿಯಿಂದ 97ನೇ ವರ್ಷದ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮ ನಡೆದಿದ್ದು ಈ ವೇಳೆ ಕಾರ್ಯಕ್ರಮಕ್ಕೆ ಸ್ಪೀಕರ್ ಯುಟಿ ಖಾದರ್ ಆಗಮಿಸಿದ್ದಾರೆ.
ಈ ಸಂದರ್ಭ ವೇದಿಕೆಯಲ್ಲಿ ಯುಟಿ ಖಾದರ್ ಅವರನ್ನು ಸುಭಾಷ್ ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್ ಹಿರಿಯರಾದ ದಿ.ಸದಾನಂದ ಪೂಂಜರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದುಕೊಂಡು ಬಂದಿದ್ದು ಇವತ್ತು ಎಲ್ಲಾ ಯುವಕರ ತಂಡ ಸೇರಿ ಒಗ್ಗಟ್ಟಿನಿಂದ ಅದನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇವತ್ತು ಈ ಸುಂದರ ಕಾರ್ಯಕ್ರಮಕ್ಕೆ ಬರುವ ಭಾಗ್ಯ ನನಗೆ ಸಿಕ್ಕಿದೆ.ಶಾಲೆಯೂ ಕೂಡ 100 ನೇ ವರ್ಷದ ಸಂಭ್ರಮದಲ್ಲಿದೆ.ಶಾಲೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮಾದರಿ ಶಾಲೆಯನ್ನಾಗಿ ಮಾಡುವ ಆಸೆ ನನ್ನದು ಹೀಗಾಗಿ ಯಾವುದೇ ಬಡ ವಿದ್ಯಾರ್ಥಿಗಳೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಸಂಘದ ಸದಸ್ಯರು ಹಾಗೂ ಊರಿನ ಎಲ್ಕರೂ ಅವರಿಗೆ ಶಿಕ್ಷಣ ನೀಡುವಂತೆ ಸಹಕರಿಸಬೇಕು ಈ ಒಂದು ಕೆಲಸಕ್ಕ ನಾನು ಕೂಡ ಸಹಕರಿಸುತ್ತೇವೆ ಎಂದು ಹೇಳಿದರು
ಇನ್ನು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಲೆಯ ಆಡಳಿತ ಮಂಡಳಿ ಈಗಾಗಲೇ ಶಾಲೆಯ ಅಭಿವೃದ್ಧಿಗೆ ಸ್ಪೀಕರ್ ಯುಟಿ ಖಾದರ್ ರವರು ಸ್ವತಃ 4 ಲಕ್ಷ ರೂ.ಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಸುಭಾಷ್ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ, ಸಜೀಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಂಜಾ, ಪಂಚಾಯತ್ ಸದಸ್ಯರಾದ ಯೋಗಿಶ್ ಬೆಳ್ಚಾಡ,ಸಜೀಪ ಮೂಡ ಗ್ರಾ.ಪಂ ಅಧ್ಯಕ್ಷರಾದ ಶೋಭಾ ಶೆಟ್ಟಿ, ಶಾರದಾ ಪೂಜಾ ಸಮಿತಿ ಅಧ್ಯಕ್ಷರಾದ ವಸಂತ್ ಕುಮಾರ್ ಬರ್ಕೆ,ಸಜೀಪಮಾಗಣೆ ತಂತ್ರಿಗಳಾದ ಎಮ್ ಸುಬ್ರಯ್ ಭಟ್,ಸಿದ್ಧಿಕ್ ಕೊಲಕೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.