ಬೇಂಕ್ಯ ರಿಕ್ಷಾ ಚಾಲಕ ಮತ್ತು ಮಾಲಕರಿಂದ ಸಿಹಿ ತಿಂಡಿ ಮತ್ತು ಪಾಣಿಯ ವಿತರಣೆ
ಬಂಟ್ವಾಳ: ಸದಾ ಕೋಮು ವಿಚಾರದಿಂದಲೇ ಸುದ್ದಿಯಲ್ಲಿರುವ ಕರಾವಳಿ ಭಾಗದಲ್ಲಿ ಈ ಬಾರಿ ಈದ್-ಮಿಲಾದ್ ಆಚರಣೆ ಸಂದರ್ಭದಲ್ಲಿ ಅಲ್ಲಲ್ಲಿ ಕೋಮು ಸೌಹಾರ್ದ ವಿಚಾರಗಳು ಸುದ್ದಿಯಾಗುತ್ತಿದ್ದು, ಕರಾವಳಿಯ ಜನರು ಮತೀಯ ರಾಜಕಾರಣದಿಂದ ಸೌಹಾರ್ದದ ವಿಚಾರಗಳತ್ತ ಆಕರ್ಷಿತರಾಗುವುದಕ್ಕೆ ಉತ್ತಮ ನಿದರ್ಶನವಾಗುತ್ತಿದೆ.
ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಬಂಟ್ವಾಳ ತಾಲೂಕಿನ ಬೇಂಕ್ಯದಲ್ಲಿ ಮುಸ್ಲಿಮ್ ಬಾಂಧವರ ಈದ್ ಮಿಲಾದ್ ಸಂಭ್ರಮಾಚರಣೆ ಸಂದರ್ಭದಲ್ಲಿ ಬೇಂಕ್ಯದ ರಿಕ್ಷಾ ಚಾಲಕರು ಮತ್ತು ಮಾಲಕರ ವತಿಯಿಂದ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮ್ ಬಾಂಧವರಿಗೆ ಬೇಂಕ್ಯ ಜಂಕ್ಷನ್ ನಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಜೊತೆಯಾಗಿ ಸಿಹಿ ತಿಂಡಿ ಮತ್ತು ತಂಪು ಪಾನೀಯಗಳನ್ನು ವಿತರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇನ್ನು, ಬೇಂಕ್ಯದ ರಿಕ್ಷಾ ಚಾಲಕರು ಮತ್ತು ಮಾಲಕರು ಈ ಹಿಂದೆಯೂ ಹಿಂದೂ -ಮುಸ್ಲಿಮ್ ಬೇದ ಭಾವವಿಲ್ಲದೆ ಅದೆಷ್ಟೋ ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಹಾಗೂ ಧನ ಸಹಾಯವನ್ನೂ ನೀಡಿದ್ದಾರೆ.ಇನ್ನು ರಿಕ್ಷಾ ಚಾಲಕರ ಮತ್ತ ಮಾಲಕರ ಈ ಸಾಮರಸ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಬೇಂಕ್ಯ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷರು ಮತ್ತು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.