Site icon newsroomkannada.com

ಮುಸ್ಲಿಂ ಯವಕನಿಂದ ಕಿರುಕುಳ ಆರೋಪ ಪೊಲೀಸರ ಮೊರೆಹೋದ ಯುವತಿ

Bengaluru woman approaches police to complain of 'love jihad'

ಬೆಂಗಳೂರು: ಮುಸ್ಲಿಂ ಯುವಕನಿಂದ ರಕ್ಷಣೆ ಕೋರಿ ಮಹಿಳೆಯೊಬ್ಬರು ಬೆಂಗಳೂರು ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗೆ ಬೆಂಬಲ ನೀಡಿದ ಆರೋಪದ ಮೇಲೆ ಮಹಿಳೆ ತನ್ನ ಸಹೋದ್ಯೋಗಿಗಳು ಮತ್ತು ಕಂಪನಿಯ ಹಿರಿಯರ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರ ಪ್ರಕಾರ, ಮಹಾರಾಷ್ಟ್ರ ಮೂಲದ ಯುವತಿ ಎಲೆಕ್ಟ್ರಾನಿಕ್ಸ್ ಸಿಟಿಯ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಅಸ್ಸಾಂ ಮೂಲದ ಅಲ್ ಮೆಹಫುಜ್ ಬರಪೋಯಾ ಎಂದು ಗುರುತಿಸಲಾಗಿದ್ದು, ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಯುವತಿ ಹಿಂದು ಧರ್ಮಕ್ಕೆ ಸೇರಿದವಳಾಗಿದ್ದು, ಆರೋಪಿ ಯುವಕ ಅಸ್ಸಾಂ ಮೂಲದ ಅಲ್ ಮೆಹಫುಜ್ ಬರಪೋಯಾ ತನ್ನನ್ನು ಮೆಲ್ವಿನ್ ತಾನು ಕ್ರಿಶ್ಚಿಯನ್‌ ಎಂದು ಹೇಳಿಕೊಂಡಿದ್ದ. ಇಬ್ಬರು ಪರಸ್ಪರ ಡೇಟಿಂಗ್‌ ನಡೆಸಿ, ಪ್ರೀತಿಸುತ್ತಿದ್ದರು .ಆದರೆ ಕೆಲ ಸಮಯದ ಬಳಿಕ ಆತನ ಆಧಾರ್ ಕಾರ್ಡ್ ನೋಡಿ ಯುವತಿಗೆ ಆತನ ನಿಜ ಹೆಸರು ಮತ್ತು ಧರ್ಮ (ಮುಸ್ಲಿಂ) ತಿಳಿದುಬಂದಿದ್ದು ಯುವತಿಗೆ ಶಾಕ್‌ ಆಗಿದೆ. ಅಲ್ಲದೆ ಸಂಬಂಧ ಕಡಿದುಕೊಂಡಿದ್ದಳು. ಆದರೆ ಆರೋಪಿಗಳು ನಂತರ ಯುವತಿಗೆ ಕಿರುಕುಳ ನೀಡುತ್ತಿದ್ದರು. ರಾತ್ರಿ ವೇಳೆ ಆಕೆಯ ನಿವಾಸದಲ್ಲಿ ಗಲಾಟೆ ಮಾಡಿ ಆಕೆ ಮತ್ತು ಆಕೆಯ ಕುಟುಂಬಸ್ಥರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಲ್ಲದೆ ಆಕೆಯ ಕೆಲಸದ ಸ್ಥಳದಲ್ಲಿ ಆಕೆಯ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ. ಮುಂದುವರಿದು ಆರೋಪಿ ಅಲ್ ಮೆಹಫುಜ್ ಬರಪೋಯಾ ಗೆ ಪರಿಹಾರವಾಗಿ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೇಳಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಕೆಲ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದರು. ಆಕೆ ಇದೀಗ ಪೊಲೀಸರ ಮೊರೆ ಹೋಗಿದ್ದು, ಆರೋಪಿಗಳಿಂದ ನ್ಯಾಯ ಮತ್ತು ರಕ್ಷಣೆ ಕೋರಿದ್ದಾಳೆ.

Exit mobile version