Site icon newsroomkannada.com

ಬೇಡಿಕೆ ಈಡೇರಿಕೆಗಾಗಿ ಬೀಡಿ ಡಿಪೋ ಎದುರು ಪ್ರತಿಭಟನೆ

ಬೀಡಿ ಮಾಲಿಕರ ಕಾರ್ಮಿಕ ನೀತಿಯನ್ನು ವಿರೋಧಿಸಿ, ಬೀಡಿ ಕಾರ್ಮಿಕರಿಗೆ ಸಿಗಬೇಕಾದ ಏರಿಳಿತ ತುಟಿ ಭತ್ಯೆಯನ್ನು ನೀಡಬೇಕೆಂದು ಒತ್ತಾಯಿಸಿ ಎಐಟಿಯುಸಿಗೆ ಒಳಪಟ್ಟ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಮತ್ತು ಸಿಐಟಿಯು ಒಳಪಟ್ಟ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಜಂಟಿ ಆಶ್ರಯದಲ್ಲಿ ಉಳ್ಳಾಲ ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ ಡಿಪೋ ಎದುರು ಪ್ರತಿಭಟನೆ ನಡೆಯಿತು.

ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬೀಡಿ ಕೈಗಾರಿಕೆಯಲ್ಲಿ 3 ಕೋಟಿಗಿಂತಲೂ ಹೆಚ್ಚಿನ ಕಾರ್ಮಿಕರು ದುಡಿಯುತ್ತಿದ್ದಾರೆ, ಬೀಡಿ ಕಾರ್ಮಿಕರಿಗೆ ಬದಲಿ ಉದ್ಯೋಗ ಇಲ್ಲದಿದ್ದರೆ ಪಿಂಚಣಿ ನೀಡಬೇಕು, ಕಾನೂನು ಬದ್ದವಾದ ನಮ್ಮ ಹಕ್ಕನ್ನು ನೀಡಬೇಕು ಎಂದರು.

ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಿ.ಸೀತಾರಾಮ ಬೆರಿಂಜ, ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ಸ್ ಯೂನಿಯನ್ ಕಾರ್ಯದರ್ಶಿ ವಿಲಾಸಿನಿ ತೊಕ್ಕಪಟ್ಟು, ಸದಸ್ಯರಾದ ಪ್ರಮೋದಿನಿ ಕಲ್ಲಾಪು, ಸುಂದರ ಕುಂಪಲ, ಜನಾರ್ದನ ಕುತ್ತಾರು, ರೋಹಿದಾಸ್ ತೊಕ್ಕೊಟ್ಟು, ಎಐಟಿಯುಸಿ ಕಾರ್ಯದರ್ಶಿ ಕರುಣಾಕರ್, ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಉಪಾದ್ಯಕ್ಷ ವಿ.ಕುಕ್ಯಾನ್ ಸದಸ್ಯ ಸುಲೋಚನಾ, ಇಬ್ರಾಹಿಂ ಮದಕ ಮೊದಲಾದವರು ಉಪಸ್ಥಿತರಿದ್ದರು.

ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ ಸಂಸ್ಥೆಯ ಉಳ್ಳಾಲ ಡಿಪೋ ಮೆನೇಜರ್ ಶಶಿಧರ್ ಮತ್ತು ರಾಮ್ ದಾಸ್ ಪ್ರತಿಭಟನೆಯ ಮುಖಂಡರನ್ನು ಬೇಟಿಯಾಗಿ ಅವರ ಸಮಸ್ಯೆಯ ಬಗ್ಗೆ ಮಾತುಕತೆ ನಡೆಸಿದರು. ಜಿಲ್ಲಾ ಉಪಾಧ್ಯಕ್ಷ ಪದ್ಮಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  ಯು.ಜಯಂತ್ ನಾಯಕ್ ವಂದಿಸಿದರು.
Exit mobile version