main logo

ಸುರತ್ಕಲ್‌ ನಲ್ಲಿ ಅಕ್ಟೋಬರ್‌ 29ರಂದು ಜೇನು ಕೃಷಿ ತರಬೇತಿ

ಸುರತ್ಕಲ್‌ ನಲ್ಲಿ ಅಕ್ಟೋಬರ್‌ 29ರಂದು ಜೇನು ಕೃಷಿ ತರಬೇತಿ

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಆಶ್ರಯದಲ್ಲಿ ವಿದ್ಯಾದಾಯಿನಿ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ತರಬೇತಿ ಸಂಸ್ಥೆ ಆಶ್ರಯದಲ್ಲಿ ತೊಡುವೆ ಜೇನು ಮತ್ತು ಮೊಜೆಂಟಿ ಜೇನು ಸಾಕಣೆ ಮಾಹಿತಿ ತರಬೇತಿ ಕಾರ್ಯಕ್ರಮ ಅ.29ರಂದು ಬೆಳಗ್ಗೆ 9.30ರಿಂದ ಗೋವಿಂದ ದಾಸ ಕಾಲೇಜು ವಿದ್ಯಾದಾಯಿನಿ ಸಂಕೀರ್ಣದಲ್ಲಿ ಬೆಳಗ್ಗೆ 9.30ರಿಂದ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಮಟ್ಟದ ತರಬೇತುದಾರರಾದ ರಾಧಾಕೃಷ್ಣ ಆರ್.‌ ಕೋಡಿ, ವೆಂಕಟಕೃಷ್ಣ ಭಟ್‌ ಬಿ. ಪಾಲ್ಗೊಳ್ಳುವರು. ಮೊಜಂಟಿ ಜೇನು ಸಾಕಾಣಿಕೆ ತರಬೇತಿ ಪಡೆಯುವವರು ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಯೇ ಪಾಲ್ಗೊಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಬೆಳಗ್ಗೆ ತುಡುವೆ ಜೇನು ಮತ್ತು ಮಧ್ಯಾಹ್ನ ನಂತರ ಮೊಜಂಟಿ ಜೇನು ಕೃಷಿ ತರಬೇತಿ ನಡೆಯಲಿದೆ. ಶಿಬಿರದ ಶುಲ್ಕ 200 ರೂಗಳಾಗಿದ್ದು, ಹೆಚ್ಚಿನ ಮಾಹಿತಿಗೆ ಶರತ್‌ ಕುಮಾರ್‌ 9343569694, ಬೀ ಭರತ್‌ 905318553,  ರತ್ನಾಕರ ಕುಳಾಯಿ 9448835606 ಅವರನ್ನು ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

error: Content is protected !!