main logo

GOOD NEWS: ಬೆಂಗಳೂರು -ಮಂಗಳೂರು ರೈಲು ಮುರ್ಡೇಶ್ವರಕ್ಕೆ ವಿಸ್ತರಣೆ

GOOD NEWS: ಬೆಂಗಳೂರು -ಮಂಗಳೂರು ರೈಲು ಮುರ್ಡೇಶ್ವರಕ್ಕೆ ವಿಸ್ತರಣೆ

ಕುಂದಾಪುರ: ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ನಿತ್ಯದ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿ ರೈಲ್ವೆ ಸಚಿವಾಲಯ ಆದೇಶಿಸಿದೆ.

ಇದರಿಂದ ಉಡುಪಿ, ಕುಂದಾಪುರ, ಮುರ್ಡೇಶ್ವರ ಭಾಗದ ಪ್ರಯಾಣಿಕರಿಗೆ ಮೈಸೂರಿನ ಜತೆಗೆ ಬೆಂಗಳೂರಿಗೆ ಮತ್ತೊಂದು ರೈಲು ಲಭಿಸಿದಂತಾಗಲಿದೆ.

ಬೆಂಗಳೂರು – ಮೈಸೂರು ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್‌ ( ನಂ 16585) ಅನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿದರೆ, ಮಂಗಳೂರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ (ನಂ 16586) ಎಕ್ಸ್‌ ಪ್ರೆಸ್‌ ಅನ್ನು ಮುರ್ಡೇಶ್ವರದಿಂದ ಆರಂಭಿಸಿ ಇಲಾಖೆ ಆದೇಶ ಹೊರಡಿಸಿದೆ.

ಇದರಿಂದ, ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ ಸಹಿತ ಈ ಭಾಗದ ಪ್ರಯಾಣಿಕರಿಗೆ ಮತ್ತು ಬೆಂಗಳೂರು-ಮೈಸೂರು ಭಾಗದಿಂದ ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ.

 

Related Articles

Leave a Reply

Your email address will not be published. Required fields are marked *

error: Content is protected !!