Site icon newsroomkannada.com

ಡೆತ್ ನೋಟ್ ಬರೆದಿಟ್ಟು ಬಿ.ಎಡ್ ವಿದ್ಯಾರ್ಥಿ ಆತ್ಮಹತ್ಯೆ

ಕಾಸರಗೋಡು: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಪದ್ಯಾಣದಲ್ಲಿ ನಡೆದಿದೆ. ಪದ್ಯಾಣದ ನಿವಾಸಿ ಸಿಲ್ವೆಸ್ಟರ್ ಕ್ರಾಸ್ತ ಎಂಬವರ ಪುತ್ರ ಐವನ್ ಕ್ರಾಸ್ತ (23) ಮೃತಪಟ್ಟವನು.

ಐವನ್ ತೊಕ್ಕೊಟ್ಟುವಿನ ಕಾಲೇಜೊಂದರ ಬಿ.ಎಡ್ ವಿದ್ಯಾರ್ಥಿಯಾಗಿದ್ದ.ಈತನ ಮೃತದೇಹ ಮಂಗಳವಾರ ರಾತ್ರಿ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶೋಧ ನಡೆಸಿದಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಈತ ಮಲಗುವ ಕೋಣೆ ಯೊಳಗೆ ಡೆತ್ ನೋಟ್ ಪತ್ತೆಯಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದನೆನ್ನಲಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಿದೆ.

Exit mobile version