ಅಯೋಧ್ಯೆ: ಆಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ವಿಶ್ವವೇ ಕಾಯುತ್ತಿದೆ. ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗ ಕೆಲವೆ ಕ್ಷಣಗಳು ಮಾತ್ರ ಬಾಕಿ. ಇತ್ತ ರಾಮ ಮಂದಿರದಲ್ಲಿ ಮಹಾಪೂಜೆಗಳು ಆರಂಭಗೊಂಡಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಯ ಪುಣ್ಯಸ್ನಾನ ಸೇರಿದಂತೆ ಮಹಾಪೂಜೆಗಳು ನಡೆಯುತ್ತಿದೆ. 114 ಕಲಶಗಳ ಔಷಧೀಯ ಜಲದಿಂದ ಪುಣ್ಯಸ್ನಾನ ಮಾಡಿಸಿ ಪೂಜೆ ಮಾಡಲಾಗಿದೆ.
ಇಂದು ಬೆಳಗ್ಗೆ ಕಲಶಗಳ ನೀರಿನಿಂದ ಮೂರ್ತಿಗಳ ಪುಣ್ಯಸ್ನಾನದ ಬಳಿ ಪ್ರತಿಷ್ಠಾಪಿಸಿರುವ ದೇವತೆಗಳಿಗೆ ನಿತ್ಯಪೂಜೆ, ಹವನ, ಪಾರಾಯಣ ನಡೆದಿದೆ.ಪ್ರಾತಃಕಾಲ ಮಾಧ್ವಾಧೀನಗಳು, ಮಹಾ ಪೂಜೆ, ಉತ್ಸವ ಮೂರ್ತಿ ಪ್ರಸಾದ ಪರಿಕ್ರಮ, ಶಾಯಾದಿ, ತತ್ತ್ವನ್ಯಾಯ, ಮಹನನ್ಯಾಸ, ಆದಿನ್ಯಾಸ, ಅಘೋರ ಹೋಮ, ವ್ಯಾಹೃತಿ ಹೋಮ,ಜಾಗರಣ, ಸಾಯನ ಪೂಜೆ ಹಾಗೂ ಆರತಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ 12.20ಕ್ಕೆ ಕಲಶದಲ್ಲಿ ಸರಯು ನದಿ ನೀರು ಹಿಡಿದುಗರ್ಭಗುಡಿ ಪ್ರವೇಶಿಸಲಿದ್ದಾರೆ. ಶ್ರೀ ಶೋಭಕೃತ್ ನಾಮ ಸಂವತ್ಸರ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ದ್ವಾದಶಿ, ಉತ್ತರಾಯಣ, ಮೃಗಶಿರಾ ನಕ್ಷತ್ರ, ಅಭಿಜಿತ್ ಲಗ್ನದ ಸಮಯವಾದ ಮಧ್ಯಾಹ್ನ 12.30ರ ವೇಳೆಗೆ ಬಾಲರಾಮನನ್ನು ಪ್ರತಿನಿಧಿಸುವ ಸುಂದರ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಚಾರಿತ್ರಿಕ ಸಮಾರಂಭದ ಮುಖ್ಯ ಯಜಮಾನತ್ವ ವಹಿಸಲಿದ್ದು, ಅವರ ಜತೆ ಕರ್ನಾಟಕದ ಲಿಂಗರಾಜ ಬಸವರಾಜ ಅಪ್ಪ ಸೇರಿದಂತೆ 14 ದಂಪತಿಗಳು ಸಹ-ಯಜಮಾನತ್ವ ವಹಿಸಿ ಧಾರ್ಮಿಕ ವಿಧಿವಿವಿಧಾನ ನೆರವೇರಿಸಲಿದ್ದಾರೆ.
ರಾಮಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಆಯೋಧ್ಯೆಗೆ ಆಗಮಿಸುತ್ತಿರುವ ಎಲ್ಲಾ ಗಣ್ಯರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆತ್ಮೀಯವಾಗಿ ಸ್ವಾಗತಕೋರಿದ್ದಾರೆ. ಇತ್ತ ಸಾಧು ಸಂತರು ಈಗಾಗಲೇ ರಾಮಜನ್ಮಭೂಮಿಗೆ ಆಗಮಿಸಿದ್ದಾರೆ.