newsroomkannada.com

ಅಯೋಧ್ಯೆಯಲ್ಲಿ ಅನುರಣಿಸಿದ ಬೆಳ್ಕಳೆ ಚೆಂಡೆ ಬಳಗದ ಚೆಂಡೆ ವಾದನ

ಅಯೋದ್ಯೆ ಶ್ರೀ ರಾಮಲಲ್ಲಾ ಪ್ರತಿಷ್ಠಾ ದಿನದಿಂದ 48 ದಿನಗಳ ಕಾಲ ನಡೆಯುತ್ತಿರುವ ಮಂಡಲ ಪೂಜೆ ಮತ್ತು ಪಲ್ಲಕ್ಕಿ ಉತ್ಸವಕ್ಕೆ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರ ಅನುಗ್ರಹದೊಂದಿಗೆ ಫೆಬ್ರವರಿ 24 ಮತ್ತು 25ನೇ ತಾರೀಖಿನಂದು ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗ ಬೆಳ್ಕಳೆ ಇವರಿಂದ ಚೆಂಡೆ ಸೇವೆ ನಡೆಯಿತು.
ಬಳಗದಿಂದ ಉಮೇಶ್ ಬಾಧ್ಯ, ಶ್ರೀಹರ್ಷ ಬೆಳ್ಕಳೆ, ರವಿ ಸಾಮಗ, ಸುನಿಲ್ ಭಟ್, ಶ್ರೀನಿಧಿ ಹಂದೆ, ಶ್ರೀನಾಥ್,ರಾಘವೇಂದ್ರ,ವಿಕ್ರಮ್ ಭಟ್, ನವೀನ್ ಬಾಧ್ಯ, ಅಭಿಲಾಷ್, ಪ್ರಸಾದ್, ಪನ್ನಗ ಸಾಮಗ, ಅಭಿಷ್ಟ ಹೆಬ್ಬಾರ್ ಸೇವೆಯಲ್ಲಿ ಪಾಲ್ಗೊಂಡರು.

2006 ರಲ್ಲಿ ಆರಂಭವಾದ ಬೆಳ್ಕಳೆ ಚೆಂಡೆ ಬಳಗವು ಉಡುಪಿ, ಮಂತ್ರಾಲಯ, ತಿರುಪತಿ ಹಾಗೂ ರಾಜ್ಯ ಮತ್ತು ಹೊರ ರಾಜ್ಯದ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಚೆಂಡೆ ವಾದನ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ. ಇದೀಗ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ನಾಡಿನಲ್ಲಿ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದುಗಳ ಸ್ವಾಭಿಮಾನದ ಪ್ರತೀಕವಾಗಿ ತಲೆ ಎತ್ತಿ ನಿಂತಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಚೆಂಡೆ ವಾದನ ಸೇವೆ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.

Exit mobile version