ಅಯೋಧ್ಯೆ: ಸಮಸ್ತ ಹಿಂದುಗಳ ಹೆಬ್ಬಯಕೆಗಳ ಮೂರ್ತರೂಪವಾಗಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಶ್ರೀ ರಾಮ ಮಂದಿರದ (Shri Rama Mandir) ಅರ್ಚಕರು ಹಾಗೂ ಸಿಬಂದಿ ವರ್ಗದ ವೇತನವನ್ನು ಶೇ.35ರಿಂದ ಶೇ.40ರವರೆಗೆ ಏರಿಕೆ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ನಿರ್ಧರಿಸಿದೆ.
“ರಾಮ ಮಂದಿರದ ಪ್ರಧಾನ ಅರ್ಚಕರು, ಅರ್ಚಕರು, ವ್ಯವಸ್ಥಾಪಕರು, ತೋಟಗಾರಿಕೆ ಸೇರಿದಂತೆ ಎಲ್ಲಾ ವಿಭಾಗದ ಸಿಬಂದಿಗಳ ವೇತನವನ್ನು ಟ್ರಸ್ಟ್ ಏರಿಕೆ ಮಾಡಿದೆ’ ಎಂದು ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಟ್ರಸ್ಟ್‌ನ ಈ ನಿರ್ಧಾರವನ್ನು ಮಂದಿರದ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್ ಸ್ವಾಗತಿಸಿದ್ದಾರೆ. ಇದರಂತೆ, ಪ್ರಧಾನ ಅರ್ಚಕರ ಮಾಸಿಕ ವೇತನವನ್ನು 25,000 ರೂ.ಗಳಿಂದ 32,900 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಅರ್ಚಕರ ವೇತನವನ್ನು 20,000 ರೂ.ಗಳಿಂದ 31,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.