ಸಿಯೋಲ್: ಕಳೆದೊಂದು ವಾರದಿಂದ ದಕ್ಷಿಣ ಕೊರಿಯಾದಲ್ಲಿ ರಣ ಭೀಕರ ಮಳೆಯಾಗುತ್ತಿದ್ದು, ಭಾರಿ ವರ್ಷಧಾರೆಗೆ 33 ಮಂದಿ ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗ್ನೇಯ ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯ ಮತ್ತು ಮಧ್ಯ ಚುಂಗ್‌ಚಿಯೊಂಗ್ ಪ್ರಾಂತ್ಯದಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ.
ಕಳೆದ ವಾರದಿಂದ 500 ಮಿ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿರುವ ಪ್ರಾಂತ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದಲ್ಲಿ ಭೀಕರ ಮಳೆ ಮತ್ತು ಪ್ರವಾಹದಿಂದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಓಸಾಂಗ್‌ನಲ್ಲಿ ಸುರಂಗ ಮಾರ್ಗದ ನೀರಿನಲ್ಲಿ ವಾಹನಗಳು ಸಿಲುಕಿ ಏಳು ಮಂದಿ ಮೃತಪಟ್ಟಿದ್ದಾರೆ. ಮಳೆಯ ಅನಾಹುತದಿಂದಾಗಿ 13 ನಗರಗಳು ಮತ್ತು ಪ್ರಾಂತ್ಯಗಳಿಂದ ಒಟ್ಟು 7,866 ಜನರನ್ನು ಸ್ಥಳಾಂತರಿಸಲಾಗಿದೆ.