ಕಾಶಿಯಾತ್ರೆ ಕೈಗೊಂಡವರಿಗೆ 5,000 ರೂ ಸಹಾಯಧನ ನೀಡಲಾಗುವ ಹೊಸ ನಿಯಮವೊಂದನ್ನು ರಾಜ್ಯ ಸರ್ಕಾರವು ಪರಿಚಯಿಸಿದೆ. ಹೌದು ಯಾತ್ರೆಗೆ ತೆರಳಿದವರು ಕಾಶಿ ವಿಶ್ವನಾಥ ದೇವಸ್ಥಾನದ 5 ಕಿಮೀ ವ್ಯಾಪ್ತಿಯಲ್ಲಿ ಜಿಯೋಟ್ಯಾಗ್ ಸೆಲ್ಫಿ ತೆಗೆದುಕೊಂಡು, ಅದನ್ನು ಸರ್ಕಾರದ ಅಪ್ಲಿಕೇಶನ್ ಅಥವಾ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವಂತೆ ಸೂಚನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಕಾಶಿ ಕಾರಿಡಾರ್ ಅನ್ನು ಉತ್ತೇಜಿಸುವ ನಿಟ್ಟಿನಲ್ಲಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ‘ಕಾಶಿ ಯಾತ್ರೆ’ ಯೋಜನೆ ಅಡಿಯಲ್ಲಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನ ನೀಡಲು ಆರಂಭಿಸಿದ್ದು, ಈ ಯೋಜನೆಯ ಫಲಾನುಭವಿಯಾಗಲು ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಯಾತ್ರಾರ್ಥಿಗಳು ಈ ಸಹಾಯಧನ ಪಡೆಯಲು ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್, ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೇಟ್ , ಫೋಟೋ, ಪೂಜಾ ರಶೀದಿ, ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ದಾಖಲೆ ಮತ್ತು ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಮುಜರಾಯಿ ಇಲಾಖೆಯ ಅಪ್ಲಿಕೇಶನ್ ಅಥವಾ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ (ಏಪ್ರಿಲ್ 1 ಕ್ಕೆ) 18 ವರ್ಷ ಪೂರೈಸಿರಬೇಕು ಎಂದು ತಿಳಿಸಿದೆ.
photo credit- twitter