main logo

ನೃತ್ಯಾಂತರಂಗದಲ್ಲಿ ‘ಅಪೂರ್ವ’ ಭರತ ನಾಟ್ಯ ಪ್ರತಿಭೆ ಅನಾವರಣ

ನೃತ್ಯಾಂತರಂಗದಲ್ಲಿ ‘ಅಪೂರ್ವ’ ಭರತ ನಾಟ್ಯ ಪ್ರತಿಭೆ ಅನಾವರಣ

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) (Sri Mookambika Cultural Academy) ಅರ್ಪಿಸುವ ‘ಚೆಂಬರ್ ಕನ್ಸರ್ಟ್’ (Chamber Concert) ಅಥವಾ  ‘ಗೃಹ ಮಾಲಿಕೆ’ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಭರತನಾಟ್ಯ (Bharatanatyam) ಪ್ರದರ್ಶನ ಕಾರ್ಯಕ್ರಮ ‘ನೃತ್ಯಾಂತರಂಗ’ ಸರಣಿಯ 105ನೇ ಕಾರ್ಯಕ್ರಮ ದರ್ಬೆಯಲ್ಲಿರುವ (Darbe) ಶಶಿಶಂಕರ ಸಭಾಂಗಣದಲ್ಲಿ (ShashiShankara Hall) ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನಗೊಂಡಿತು..

ನೃತ್ಯ ಗುರುಗಳಾಗಿರುವ ವಿದ್ವಾನ್ ದೀಪಕ್ ಪುತ್ತೂರು (Deepak Puttur) ಅವರ ಪರಿಕಲ್ಪನೆಯಾಗಿರುವ ಈ ನೃತ್ಯಾಂತರಂಗ ಸರಣಿ ಕಾರ್ಯಕ್ರಮ ಇದೀಗ ಶತ ಪ್ರದರ್ಶನಗಳನ್ನು ಪೂರೈಸಿ 105ನೇ ಪ್ರದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಈ ನೃತ್ಯಾಂತರಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ಅಪೂರ್ವ ಗೌರಿ ದೇವಸ್ಯ (Apoorva Gowri Devasya) ನೀಡಿದ ಭರತ ನಾಟ್ಯ ಪ್ರದರ್ಶನ ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಯಿತು. ಮಂಗಳೂರಿನ ‘ಗಾನ-ನೃತ್ಯ ಅಕಾಡೆಮಿ’ಯ ನಿರ್ದೇಶಕರಾಗಿರುವ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ‘ನೃತ್ಯಾಂತರಂಗ-105’ರ ಅಭ್ಯಾಗತರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತುಂಬಿದರು.
ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಗಿತೇಶ್ ನೀಲೇಶ್ವರ, ಕೊಳಲಿನಲ್ಲಿ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದರು.
ಅಕ್ಷತಾ ಕೆ. ಅವರ ಸೊಗಸಾದ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರಣಮ್ಯ ನೆರವೇರಿಸಿದರೆ ವಿದ್ವಾನ್ ಗಿರೀಶ್ ಕುಮಾರ್ ಶಂಖನಾದ ಮತ್ತು ವಿದುಷಿ ಪ್ರೀತಿಕಲಾ ಓಂಕಾರ ನಾದವನ್ನು ಮಾಡುವುದರ ಮೂಲಕ ಕಾರ್ಯಕ್ರಮ ಚಾಲನೆ ಪಡೆದುಕೊಂಡಿತು.
ಪಂಚಾಗ ಶ್ರವಣ ಕು| ಶೌರಿಕೃಷ್ಣ ಮಾಡಿದರೆ, ಅಭ್ಯಾಗತರು ಹಾಗೂ ಕಲಾವಿದರ ಪರಿಚಯವನ್ನು ಮಂದಿರಾ ಕಜೆ ಹಾಗೂ ವಿವಾಶ್ರಿ ನಡೆಸಿಕೊಟ್ಟರು. ನೃತ್ಯಾಂತರಂಗ ಒಟ್ಟು ನಿರ್ವಹಣೆ ವಿದ್ವಾನ್ ದೀಪಕ್ ಕುಮಾರ್ ನೇತೃತ್ವದಲ್ಲಿ ನಡೆಯಿತು.

ಈ ಅಪೂರ್ವ ನೃತ್ಯಾಂತರಂಗದ ಚಿತ್ರ ಸಂಚಯ ಇಲ್ಲಿದೆ:




Related Articles

Leave a Reply

Your email address will not be published. Required fields are marked *

error: Content is protected !!