ಮಂಗಳೂರು: ನಗರದ ತ್ಯಾಜ್ಯ ನಿರ್ವಹಣೆಯನ್ನು ನಿರ್ವಹಿಸುತ್ತಿರುವ ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಲಿಮಿಟೆಡ್, ಎಂಸಿಸಿ (ಮಂಗಳೂರು ಮಹಾನಗರ ಪಾಲಿಕೆ)ಗೆ ಲೀಗಲ್ ನೋಟಿಸ್ ನೀಡಿದ್ದು, ಆಗಸ್ಟ್ 1 ರಿಂದ ಕಸ ಸಂಗ್ರಹಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಪಾಲಿಕೆಗೆ ತಿಳಿಸಿದೆ.
ನೋಟಿಸ್‌ನಲ್ಲಿ ಕಂಪನಿಯು, “ಎಂಸಿಸಿ ಉದ್ದೇಶಪೂರ್ವಕವಾಗಿ ನಮ್ಮ ಕಂಪನಿಗೆ ಪಾವತಿಸಲು 68.85 ಕೋಟಿ ರೂಪಾಯಿಗಳನ್ನು ಬಾಕಿ ಇರಿಸಿದೆ. ಈ ಸೂಚನೆಯನ್ನು ಸ್ವೀಕರಿಸಿದ ಏಳು ದಿನಗಳಲ್ಲಿ, ಎಂಸಿಸಿ ಮೊತ್ತವನ್ನು ಪಾವತಿಸಬೇಕು. ಮೊತ್ತವನ್ನು ಬಾಕಿ ಇರಿಸಿರುವ ದಿನದಿಂದ ಶೇ.18ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಕಸ ಸಂಗ್ರಹಿಸಲು ಎಂಸಿಸಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದೆ.
ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಲಿಮಿಟೆಡ್‌ನ ಗುತ್ತಿಗೆಯು ಜುಲೈ 2023 ರ ಅಂತ್ಯಕ್ಕೆ ಮುಗಿಯಲಿದೆ. ಆದಾಗ್ಯೂ, ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಂಸಿಸಿ ಯಿಂದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸುವವರೆಗೆ ಅವರ ಗುತ್ತಿಗೆ ಆರು ತಿಂಗಳವರೆಗೆ ವಿಸ್ತರಿಸಲಾಗುವುದು ನಿರ್ಣಯ ಕೈಗೊಳ್ಳಲಾಗಿದೆ.