main logo

ನಮೀಬಿಯಾದಿಂದ ತರಲಾಗಿದ್ದ ಮತ್ತೊಂದು ಚೀತಾ ಸಾವು

ನಮೀಬಿಯಾದಿಂದ ತರಲಾಗಿದ್ದ ಮತ್ತೊಂದು ಚೀತಾ ಸಾವು

ಭೋಪಾಲ್‌: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾಗಿದ್ದ, ಒಟ್ಟು 20 ಚೀತಾಗಳಲ್ಲಿ 8 ಚೀತಾಗಳು ಸಾವನ್ನಪ್ಪಿದೆ. ಇದೀಗ ಮತ್ತೊಂದು ಚೀತಾ ಸಾವನ್ನಪ್ಪಿದ್ದು, ಇದು ಸೇರಿ 4 ತಿಂಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿರುವ ಚೀತಾವನ್ನು ಸೂರಜ್​ ಎಂದು ಗರುತಿಸಲಾಗಿದೆ.

ಸೂರಜ್ ಎಂಬ ಚೀತಾದ ಸಾವಿಗೆ ಕಾರಣ ಏನು ಎಂಬದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ, ಮತ್ತೊಂದು ತೇಜಸ್ ಎಂಬ ಗಂಡು ಚೀತಾ ಸಾವನ್ನಪ್ಪಿದೆ. ಈ ಚೀತಾ ಆಂತರಿಕವಾಗಿ ದುರ್ಬಲವಾಗಿತ್ತು ಎಂದು ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ.

ತೇಜಸ್ ಒಂದು ಹೆಣ್ಣು ಚೀತಾದೊಡನೆ ಕಾದಾಟದಲ್ಲಿ ತೋಡಗಿತ್ತು. ಇದರಿಂದ ತೇಜಸ್​​ಗೆ ಗಂಭೀರ ಗಾಯಗಳಾಗಿದ್ದು, ಕೊನೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

Related Articles

Leave a Reply

Your email address will not be published. Required fields are marked *

error: Content is protected !!