ಹಿಂದಿ ಬಿಗ್ ಬಾಸ್ ಮನೆಯಲ್ಲಿ ಇರುವ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ದಂಪತಿ ಮಾತನಾಡುತ್ತಾ ಅಂಕಿತ ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆ ಬಳಿಕ ಬಿಗ್ ಬಾಸ್ ಕಡೆಯಿಂದ ಪ್ರೆಗ್ನೆನ್ಸಿ ಟೆಸ್ಟ್ ಮಾಡಲಾಯಿತು. ಟೆಸ್ಟ್ ವೇಳೆ ರಿಸಲ್ಟ್ ನೆಗೆಟಿವ್ ಬಂದಿದೆ. ಒಂದು ವೇಳೆ ಪ್ರೆಗ್ನೆಂಟ್ ಆಗಿದ್ದರೆ ಅವರು ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು.
ಪತಿಯ ಜೊತೆ ಅಂಕಿತಾ ಮಾತನಾಡುತ್ತಾ, ‘ನನಗೆ ಪಿರಿಯಡ್ಸ್ ಆಗಿಲ್ಲ. ನನ್ನ ಭಾವನೆಗಳಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ನಾನು ಪ್ರೆಗ್ನೆಂಟ್ ಎನ್ನುವ ಭಾವನೆ ಕಾಡುತ್ತಿದೆ’ ಎಂದು ಅಂಕಿತಾ ಹೇಳಿದ್ದರು.
ಇದೀಗ ಅಂಕಿತಾ ಅವರ ಪ್ರೆಗ್ನೆನ್ಸಿ ಟೆಸ್ಟ್ನ ರಿಸಲ್ಟ್ ಬಂದಿದೆ ಎನ್ನಲಾಗಿದೆ. ಅವರು ಪ್ರೆಗ್ನೆಂಟ್ ಅಲ್ಲ ಅನ್ನೋದು ಖಚಿತವಾಗಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಶೀಘ್ರವೇ ಘೋಷಣೆ ಆಗುತ್ತದೆಯೇ ಅಥವಾ ಈ ವಿಚಾರವನ್ನು ಗುಟ್ಟಾಗಿಯೇ ಇಡಲಾಗುತ್ತದೆ ಎನ್ನುವ ಕುತೂಹಲ ಇದೆ.