ಪುತ್ತೂರು: ನಗರ ಠಾಣಾ PSI ಆಗಿ ಆಂಜನೇಯ ರೆಡ್ಡಿ ನೇಮಕಗೊಂಡಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯ ನಾಲ್ಕು ಪಿ.ಎಸ್.ಐ. ಹುದ್ದೆಗಳಲ್ಲಿ ಮೂರು ಹುದ್ದೆ ಖಾಲಿಯಾಗಿತ್ತು. ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕ ಅಶೋಕ್ ಕುಮಾರ್ ರೈ, ಒಂದು ವಾರದೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಅದರಂತೆ, ಪಿ.ಎಸ್.ಐ. ಆಂಜನೇಯ ರೆಡ್ಡಿ ಅವರನ್ನು ನಗರ ಠಾಣೆಗೆ ನೇಮಕ ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಪಿ.ಎಸ್.ಐ. ಶ್ರೀಕಾಂತ್ ರಾಥೋಡ್ ಅವರ ವರ್ಗಾವಣೆ ಬಳಿಕ ಈ ಹುದ್ದೆ ಖಾಲಿಯಾಗಿಯೇ ಇತ್ತು.
ಆಂಜನೇಯ ರೆಡ್ಡಿ ಅವರು ಈ ಮೊದಲು ಕಡಬ, ಬೆಳ್ಳಾರೆ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ತಮ್ಮ ದಕ್ಷ ಮತ್ತು ಪ್ರಾಮಾಣಿಕ ಸೇವೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.