ಕೋಲ್ಕತ್ತಾ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 30 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಿದೇಶಿ ಬ್ರಾಂಡ್ ವಾಚ್‌ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಶನಿವಾರ ಬಂಧಿಸಿದೆ. ಆತನಿಂದ ದುಬಾರಿ ಬೆಲೆಯ ಗ್ರೂಬೆಲ್ ಫೋರ್ಸೆ ಬ್ರಾಂಡ್ ವಾಚ್ ವಶಪಡಿಸಿಕೊಳ್ಳಲಾಗಿದೆ.
ನಂತರ ಆತನ ಮನೆಯ ಮೇಲೆ ದಾಳಿ ನಡೆದಿದ್ದು, ಈ ವೇಳೆ ವಿವಿಧ ಪ್ರೀಮಿಯಂ ಬ್ರಾಂಡ್‌ಗಳ 34 ದುಬಾರಿ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರೂಬೆಲ್ ಫೋರ್ಸೆ, ಪರ್ನೆಲ್, ಲೂಯಿ ವಿಟಾನ್, MB&F, ಮ್ಯಾಡ್, ರೋಲೆಕ್ಸ್, ಆಡೆಮರ್ಸ್ ಪಿಗೆಟ್, ರಿಚರ್ಡ್ ಮಿಲ್ಲೆ ವಾಚ್ ಗಳು ಈ ಪಟ್ಟಿಯಲ್ಲಿ ಸೇರಿವೆ. “ಈ ವಾಚ್‌ಗಳಲ್ಲಿ ಹೆಚ್ಚಿನವು ಸೀಮಿತ ಆವೃತ್ತಿಯ ವಾಚ್‌ಗಳಾಗಿವೆ. ಎಲ್ಲಾ ವಾಚ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯವು 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಆರೋಪಿ ಸಿಂಗಾಪುರದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ವ್ಯಕ್ತಿಯನ್ನು ಬಂಧಿಸಿದ್ದು. ಈ ವ್ಯಕ್ತಿ ವಿದೇಶದಿಂದ ನಿಯಮಿತವಾಗಿ ಪ್ರೀಮಿಯಂ ವಾಚ್‌ಗಳನ್ನು ಹೊತ್ತು ಭಾರತಕ್ಕೆ ಹಿಂತಿರುಗುತ್ತಾರೆ. ಪ್ರತಿ ಬಾರಿ ಕಸ್ಟಮ್ಸ್ ಸುಂಕ ಶುಲ್ಕ ಪಾವತಿಸದೆ ಗಡಿಯಾರಗಳನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.