Site icon newsroomkannada.com

ಸುಳ್ಯ ಮೂಲದ 83 ವರ್ಷದ ವೃದ್ಧ ಮಹಿಳೆಗೆ ಕೊರೊನಾ ಪಾಸಿಟಿವ್

ಸುಳ್ಯ: ದಿನದಿಂದ ದಿನಕ್ಕೆ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿಗಳಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.

ಸುಳ್ಯ ಮೂಲದ 83 ವರ್ಷದ ವೃದ್ಧ ಮಹಿಳೆಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ನಿನ್ನೆ (ಬುಧವಾರ) ಮಂಗಳೂರಿನ‌ ಖಾಸಗಿ‌ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಗೆ ಮಹಿಳೆ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ವೃದ್ಧೆಯ ಸ್ವಾಬ್ ಸಂಗ್ರಹಿಸಿ ಟೆಸ್ಟ್ ಗೆ ಆಸ್ಪತ್ರೆ ಸಿಬ್ಬಂದಿ ಕಳಿಸಿದ್ದರು. ಇಂದು ಅದರ ವರದಿ ಹೊರ ಬಿದ್ದಿದ್ದು ಕೊರೊನಾ ಪಾಸಿಟಿವ್ ಎಂದು ದೃಢ ಪಟ್ಟಿದೆ. ಸದ್ಯ ವೃದ್ಧ ಮಹಿಳೆಯನ್ನು ಸುಳ್ಯದಲ್ಲಿ ಹೋಮ್ ಐಸೋಲೇಷನ್ ನಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

Exit mobile version