ಮಂಗಳೂರು: ಶಾರದಾ ರಾಮರಾವ್ ಚಾರಿಟೇಬಲ್ ಟ್ರಸ್ಟಿನಿಂದ ಶಕ್ತಿನಗರದ ಗಣೇಶ ಗೋವು ನಿಲಯಕ್ಕೆ ಪದಾಧಿಕಾರಿಗಳು ಭೇಟಿ ಕೊಟ್ಟು ಸಹಾಯ ಹಸ್ತದ ಮೂಲಕ ಗೋವುಗಳಿಗೆ ಬೇಕಾದ ಪರಿಕರಗಳು ಹಾಗೂ ೬ ತಿಂಗಳಿಗೆ ಬೇಕಾಗುವಷ್ಟು ಪಶುಮೇಧ ಮತ್ತು ಆಹಾರವನ್ನು ಹಸ್ತಾಂತರಿಸಲಾಯಿತು.
ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪಿ. ರವೀಂದ್ರರಾವ್ ಮಾತನಾಡಿ ಈ ಗೋವು ಆಶ್ರಯದಲ್ಲಿ ಸುಮಾರು ೨೦ರಷ್ಟು ಪಶುಗಳಿದ್ದು ಎಲ್ಲಾ ಸ್ವದೇಶಿ ತಳಿಯದಾಗಿದೆ. ಇದರ ಮೂಲಕ ಶ್ರೀ ಗಣೇಶ ಎಂಬವರು ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದು ಸಜ್ಜನ ಸರಳ ಹಾಗೂ ಪರೋಪಕಾರಿಯಾಗಿದ್ದು ತನ್ನ ದುಡಿಮೆಯಲ್ಲಿ ಬಂದ ಆದಾಯ ವನ್ನು ಸಂಪೂರ್ಣವಾಗಿ ಈ ಗೋವು ಆಶ್ರÀಮಕ್ಕೆ ವಿನಿಯೋಗಿಸಿಕೊಳ್ಳುತ್ತಿದ್ದಾರೆ. ಗೋವಿನಲ್ಲಿ ಸಾಕ್ಷಾತ್ ಭಗವಂತನನ್ನು ಕಾಣುವುದರಿಂದ ಕೋಟಿ ದೇವತೆಗಳು ಗೋವಿನಲ್ಲಿ ಇದ್ದಾರೆ ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ ಪ್ರಾಣಿಗಳಲ್ಲಿ ಗೋವು ಬಹಳ ಷಷಷ ಎಂದು ಹೇಳಿದರು.
ಟ್ರಸ್ಟಿಗಳಾದ ಸುರೇಂದ್ರರಾವ್ ಮಾತಾನಾಡಿ ತಮ್ಮ ಬಾಲ್ಯ ಜೀವನದಲ್ಲಿ ಮನೆಯಲ್ಲಿದ್ದ ಗೋವು ಮತ್ತು ಅದರ ಕರುಗಳೊಡನೆ ಆಟವಾಡುತ್ತಿದ್ದ ಸನ್ನಿವೇಶವನ್ನು ಸ್ಮರಿಸಿ ಗೋವಿನ ಮಹತ್ವವನ್ನು ಹಾಗೂ ಈ ಗಣೇಶಗೋವು ನಿಲಯಕ್ಕೆ ಶುಭ ಕೋರಿದರು.
ಟ್ರಸ್ಟಿಗಳಾದ ಪಿ. ವಸಂತಿರಾವ್, ಶುಭರಾವ್, ಉಷಾ ರಾವ್, ಹಾಗೂ ಪಿ.ಬಿ. ರಾವ್, ಕಾರ್ತಿಕ್ ರಾವ್ ಸಹಕರಿಸಿದರು. ಗಣೇಶರವರು ಸ್ವಾಗತಿಸಿ ಶೋಭಾರಾವ್ ವಂದನಾರ್ಪಣೆಯನ್ನು ಮಾಡಿದರು.