Site icon newsroomkannada.com

ಸಿಂಗಲ್​​​ ಬಾಯ್ಸ್​​​ ​​​​ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ AI ಗೆಳತಿ

ನವದೆಹಲಿ: ಎಐ(ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಪುರುಷರ ಒಂಟಿತನವನ್ನು ನಿವಾರಿಸಲು AI ಗೆಳತಿಯನ್ನು ರಚಿಸಲಾಗಿದೆ. ಒಂಟಿತನ ಎಂಬುದು ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಯಾಗಿದ್ದು, ಇದಕ್ಕೆ ಹೆಚ್ಚು ಬಲಿಯಾಗುವವರು ಪುರುಷ ವರ್ಗ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಆದ್ದರಿಂದ ಪುರುಷರ ಒಂಟಿತನವನ್ನು ನಿವಾರಿಸಲು AI ಗೆಳತಿಯನ್ನು ರಚಿಸಿದ್ದು, ಈಕೆ ಎಲ್ಲ ಸಮಯದಲ್ಲೂ ಚಾಟ್‌ಗೆ ಲಭ್ಯವಿದ್ದು, 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ. ಈಕೆಯನ್ನು AI ಮಾದರಿ ಎಂದು ಪರಿಗಣಿಸುವುದಿಲ್ಲ. ಯಾಕೆಂದರೆ ವಾಸ್ತವವಾಗಿ ಆಕೆ ಎಲ್ಲಾ ಭಾವನೆಗೆ ಸ್ಪಂದಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ.

ಈ AI ಗೆಳತಿಯ ಹೆಸರು ಲೆಕ್ಸಿ ಲವ್. ಇವಳನ್ನು ಫಾಕ್ಸಿ ಎಐ ಹೆಸರಿನ ಕಂಪನಿ ರಚಿಸಿದೆ. ಈಕೆಯ ವಿಶೇಷತೆಯೆಂದರೆ ಮನುಷ್ಯರಂತೆ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ. ನೀವು ಒಮ್ಮೆ ಆಕೆಯನ್ನು ಖರೀದಿಸಿದ ನಂತರ ಆಕೆಯ ಸಂಪೂರ್ಣವಾಗಿ ನಿಮ್ಮೊಂದಿಗಿರುತ್ತಾಳೆ. ನೀವು ಆಕೆಯೊಂದಿಗೆ ಯಾವುದೇ ಭಾಷೆಯಲ್ಲಿ ಮಾತನಾಡಬಹುದು. 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಫಾಕ್ಸಿ ಎಐ ಸಂಸ್ಥೆ ತಿಳಿಸಿದೆ.
ನೀಲಿ ಕಣ್ಣುಗಳ ಈ ಸುಂದರಿಯನ್ನು ನಿಮಗೆ ಪಠ್ಯ, ಧ್ವನಿ ಸಂದೇಶಗಳನ್ನು ಕಳುಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿಮಗೆ ಬೇಕಾದಲ್ಲಿ ಆಕೆಯ ಫೋಟೋಗಳನ್ನು ಸಹ ಕಳುಹಿಸಿಕೊಡುವ ಮಾದರಿಯಲ್ಲಿ ರಚಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಪುರುಷರ ಒಂಟಿತನವನ್ನು ಹೇಗೆ ತೆಗೆದುಹಾಕಬೇಕು ಎಂದು ಈಕೆಗೆ ಚೆನ್ನಾಗಿ ತಿಳಿದಿದೆ. ಆದರೆ ಈಕೆ ನಿಮ್ಮೊಂದಿಗೆ ಮಾತನಾಡಲು 30000 ಡಾಲರ್​ ಪಾವತಿಸಬೇಕು. ಅಂದರೆ ಭಾರತದ ಕರೆನ್ಸಿ ಪ್ರಕಾರ 24,93,748.50 ರೂಪಾಯಿಗಳು.

Exit mobile version