ಮಂಗಳೂರು: ಕೃಷಿ ಮಾಹಿತಿ ಶಿಬಿರ ಹಾಗೂ ಸರಕಾರದ ಸವಲತ್ತು ವಿತರಣಾ ಕಾರ್ಯಕ್ರಮ. ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಕಡಬ ತಾಲೂಕು ಪರಿಶಿಷ್ಟ ಜಾತಿಯ ಕೃಷಿ ಕುಟುಂಬದವರಿಗೆ ಕಡಬ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಆಪತ್ಬಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸಮಠ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾಕ್ಟರ್ ಟಿ ಜೆ ರಮೇಶ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾಕ್ಟರ್ ಮಲ್ಲಿಕಾರ್ಜುನ (ಮಣ್ಣು ವಿಜ್ಞಾನಿ) ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪುತ್ತೂರು ತೋಟಗಾರಿಕಾ ಇಲಾಖೆಯ ಸಹ ನಿರ್ದೇಶಕರು ಶಿವಪ್ರಕಾಶ್ ತೋಟಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ವಿಜ್ಞಾನಿಗಳಾದ ಡಾಕ್ಟರ್ ಮಲ್ಲಿಕಾರ್ಜುನ್ ಹಾಗೂ ಡಾಕ್ಟರ್ ರಮೇಶ್ ಪೌಷ್ಠಿಕ ಕೈತೋಟದ ಕುರಿತು ತರಬೇತಿ ನೀಡಿದರು. ಪರಿಶಿಷ್ಟ ಜಾತಿಯ 20 ಜನರಿಗೆ ಕೃಷಿಗೆ ಸಂಬಂಧಪಟ್ಟ ಸರಕಾರದ ಸೌಲಭ್ಯವನ್ನು ವಿತರಣೆ ಮಾಡಿದರು. ದಲಿತ ಸಂಘಟನೆಯ ಹಿರಿಯ ಮುಖಂಡರಾದ ಕೆ.ಪಿ.ಆನಂದ ಪಡುಬೆಟ್ಟು ಇವರು ಶುಭ ಹಾರೈಸಿ ಅಧಿಕಾರಿಗಳಿಗೆ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಣ್ಣಿ ಎಳ್ತಿಮಾರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ವಂದಿಸಿ ಸಂಘಟನೆಯ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮ ಪಟ್ಟು ಸರಕಾರದ ಸವಲತ್ತುಗಳನ್ನು ಪಡೆಯಬೇಕು ಎಂದು ಸಂಘಟನಾತ್ಮಕವಾಗಿ ಮಾಹಿತಿ ನೀಡಿದರು.ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀ ಶೈಲ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಭೆಯಲ್ಲಿ 40 ಜನ ಉಪಸ್ಥಿತರಿದ್ದರು.