ಶ್ರೀಹರಿಕೋಟಾ: ಚಂದಿರನ (Moon) ದಕ್ಷಿಣ ಧ್ರುವದಲ್ಲಿ (South Poll) ತನ್ನ ಲ್ಯಾಂಡರನ್ನು (Lander) ಯಶಸ್ವಿಯಾಗಿ ಇಳಿಸಿ ಅದರಲ್ಲಿದ್ದ ಪ್ರಗ್ಯಾನ್ ರೋವರ್ (Pragyan Rover) ಮೂಲಕ ಶಶಿಯಂಗಳದ ಕುತೂಹಲಕಾರಿ ವಿಷಯಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿರುವ ಇಸ್ರೋ (ISRO) ಇದೀಗ ಇನ್ನೊಂದು ಸಾಧನೆಗೆ ಕೈ ಹಾಕಿದೆ.
ಈ ಚಂದ್ರ (Moon) ಮತ್ತು ಮಂಗಳನಲ್ಲಿಗೆ (Mars) ತನ್ನ ಅಧ್ಯಯನ ನೌಕೆಗಳನ್ನು ಯಶಸ್ವಿಯಾಗಿ ಕಳುಹಿಸಿದ ಬಳಿಕ ಇದೀಗ ಇಸ್ರೋ ನೇರವಾಗಿ ಸೂರ್ಯನತ್ತ (Sun) ತನ್ನ ದೃಷ್ಟಿಯನ್ನು ನೆಟ್ಟಿದೆ!
ಇಂದು (ಸೆ.02) ಪೂರ್ವಾಹ್ನ 11.50ಕ್ಕೆ ಸರಿಯಾಗಿ ಆದಿತ್ಯ ಎಲ್-1 (Aditya-L1) ನೌಕೆ ಸೂರ್ಯನ ಕಕ್ಷೆಯತ್ತ ಹಾರಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.
ಶ್ರೀಹರಿಕೋಟದಲ್ಲಿರುವ (Sriharikota) ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ (Satish Dhawan Space Centre) ಆದಿತ್ಯ ಎಲ್-1 ನೌಕೆಯನ್ನು ಹೊತ್ತ ಪಿ.ಎಸ್.ಎಲ್.ವಿ – ಸಿ57 ರಾಕೆಟ್ ಇಂದು 11.50ಕ್ಕೆ ಸರಿಯಾಗಿ ನಭಕ್ಕೆ ಜಿಗಿಯಲಿದೆ.
ಆದಿತ್ಯ-ಎಲ್ 1 ಸೌರ ನೌಕೆ ತನ್ನ ನಿರ್ಧಿಷ್ಟ ಗುರಿಯನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ.
ರಾಕೆಟ್ ನ ಎಲ್ಲಾ ಆಂತರಿಕ ತಪಾಸಣೆ ಪೂರ್ಣಗೊಂಡಿದ್ದು ಈ ಮೂಲಕ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಭಾರತ ಪ್ರಥಮ ಬಾಹ್ಯಾಕಾಶ ಆಧಾರಿತ ಪರಿವೀಕ್ಷಣಾ ನೌಕೆ ನಭಕ್ಕೇರಲು ಸಿದ್ಧಗೊಂಡಿದೆ ಎಂದು ಇಸ್ರೋ ಸೆ.30ರ ಬುಧವಾರದಂದೇ ಮಾಹಿತಿ ನೀಡಿತ್ತು.
PSLV-C57/#Aditya-L1 Mission: The countdown leading to the launch at 11:50 Hrs. IST on September 2, 2023, has commenced. #ISRO pic.twitter.com/DzD4VCsNiu
— Dr Jitendra Singh (@DrJitendraSingh) September 1, 2023
ಆದಿತ್ಯ ಎಲ್-1 ಗಗನ ನೌಕೆ ಸೂರ್ಯನ ಬಾಹ್ಯ ಆವರಣದ (ಸೋಲಾರ್ ಕೊರೊನಾ) ಮಾಹಿತಿಯನ್ನು ಮತ್ತು ಎಲ್-1 (ಸೂರ್ಯ-ಭೂಮಿಯ ಸಮಾನ ಧ್ರುವ ಪ್ರದೇಶ)ನಲ್ಲಿ ಸೌರ ಮಾರುತಗಳ ಮಾಹಿತಿಯನ್ನೂ ಕಲೆಹಾಕಲಿದೆ. ಈ ಎಲ್-1 ಕೇಂದ್ರ ಭೂಮಿಯಿಂದ 1.5 ಮಿಲಿಯನ್ (15 ಲಕ್ಷ) ಕಿಲೋಮೀಟರ್ ದೂರದಲ್ಲಿದೆ.
ಈ ಯೋಜನೆ ಯಶಸ್ವಿಯಾದ ಪಕ್ಷದಲ್ಲಿಸೂರ್ಯ ಮತ್ತು ಭೂಮಿಯ ಐದು ಲ್ಯಾಗ್ರೇಂಜ್ ಪಾಯಿಂಟ್ ಗಳಲ್ಲಿ ಒಂದು ಪಾಯಿಂಟ್ ಗೆ ಆದಿತ್ಯ ಎಲ್-1 ಪ್ರವೇಶಿಸಲಿದೆ ಮತ್ತು ಅಲ್ಲಿಂದ, ಈ ನೌಕೆ ಸೂರ್ಯನ ಸ್ಪಷ್ಟ ಚಿತ್ರಗಳನ್ನು ಮತ್ತು ಭೂಮಿ ಹಾಗೂ ಇತರೇ ಗ್ರಹಗಳ ಸಮೀಪ ವಾತಾವರಣ ಸ್ಥಿತಿಯ ಮೇಲೆ ಇವುಗಳ ಪರಿಣಾಮವನ್ನು ಅಧ್ಯಯನ ಮಾಡಲಿದೆ. ಇದರ ಜೊತೆ ಇನ್ನೂ ಹತ್ತು ಹಲವು ಮಾಹಿತಿಗಳನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳುವ ಉದ್ದೇಶವನ್ನು ಇಸ್ರೋ ಹಾಕಿಕೊಂಡಿದೆ.