ಬೆಂಗಳೂರು: ವರ್ತೂರು ಸಂತೋಷ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಜನರಿಂದ ಅವರಿಗೆ ಭರ್ಜರಿ ಬೆಂಬಲ ಕೂಡ ಸಿಕ್ಕಿದೆ. ಆದರೆ ಅರ್ಧದಲ್ಲೇ ಅವರು ಆಟ ಬಿಡಲು ತಯಾರಾಗಿದ್ದಾರೆ.
ವೀಕ್ಷಕರು ಅವರಿಗೆ ಬರೋಬ್ಬರಿ 34 ಲಕ್ಷಕ್ಕೂ ಹೆಚ್ಚು ವೋಟ್ ಮಾಡಿದ್ದಾರೆ. ಜನರ ಅಭಿಪ್ರಾಯದ ವಿರುದ್ಧವಾಗಿ ಹೋಗಲು ತಾವು ಸಿದ್ಧರಿಲ್ಲ ಎಂದು ಕಿಚ್ಚ ಸುದೀಪ್ ಕೂಡ ಹೇಳಿದ್ದಾರೆ. ಹಾಗಿದ್ದರೂ ವರ್ತೂರು ಸಂತೋಷ್ ಅವರು ಕಣ್ಣೀರು ಹಾಕುವುದು ನಿಲ್ಲಿಸಿಲ್ಲ. ನವೆಂಬರ್ 13ರ ಎಪಿಸೋಡ್ನಲ್ಲಿ ತಮ್ಮ ನಿರ್ಧಾರ ಏನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ನವೆಂಬರ್ 13ರ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಅವರನ್ನು ಮನವೊಲಿಸಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಿದರು. ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ಅತಿಥಿಯಾಗಿ ಬಂದ ಸುಷ್ಮಾ ರಾವ್ ಸೇರಿದಂತೆ ಎಲ್ಲರೂ ಪದೇ ಪದೇ ಅದನ್ನೇ ಹೇಳಿದಾಗ ವರ್ತೂರು ಸಂತೋಷ್ ಅವರಿಗೆ ಇನ್ನೂ ಬೇಸರ ಆಯಿತು. ಮತ್ತೆ ಮತ್ತೇ ಅದೇ ವಿಷಯ ಕೆದಕಬೇಡಿ ಎಂದು ಅವರು ಸ್ವಲ್ಪ ಗರಂ ಆಗಿಯೇ ಹೇಳಿದರು. ‘ಇಷ್ಟೆಲ್ಲ ಆದ ಮೇಲೆ ಇರು ಎಂದರೆ ಇರೋಕೆ ಆಗಲ್ಲ. ಚಿನ್ನದ ಚೈನ್ನಲ್ಲಿ ಕಟ್ಟಿ ಹಾಕಿದ್ರೂ ಇರೋಕೆ ಆಗಲ್ಲ’ ಎಂದು ವರ್ತೂರು ಸಂತೋಷ್ ಅವರು ಹೇಳಿದ್ದಾರೆ